ಕೃತಕ ಬುದ್ಧಿಮತ್ತೆ ಕುರಿತು ಒಂದು ದಿನದ ಸೆಮಿನಾರ್ ಉದ್ಘಾಟನೆ

ಬೆಳಗಾವಿ:ಫೆ-18: ಬೆಳಗಾವಿಯ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಡಿಪಾರ್ಟ್ ಮೆಂಟ್ ನ ಎಸ್ ಜಿ ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಒಂದು ದಿನ “ಕೃತಕ ಬುದ್ಧಿಮತ್ತೆ” ( Artificial Intelligence)ಯ ಕುರಿತಾದ ಒಂದು ದಿನದ ಸೆಮಿನಾರ್ ಅನ್ನು ಮುಖ್ಯ ಅತಿಥಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಧಾರವಾಡದ ಡೀನ್ ಡಾ. ಎಸ್.ಆರ್ ಮಹಾದೇವ್ ಪ್ರಸನ್ನ ಉದ್ಘಾಟಿಸಿದರು.

ಸೆಮಿನಾರ್ ನಲ್ಲಿ ಡಾ. ಎಸ್ ಆರ್ ಮಹಾದೇವ್ ಪ್ರಸನ್ನ ಅವರು, ಕೃತಕ ಬುದ್ಧಿಮತ್ತೆ ಮತ್ತು ಮಾನವ ಕಂಪ್ಯೂಟರ್ ಹೇಗೆ ಪರಸ್ಪರ ಕಾರ್ಯ ನಿವೃಹಿಸುತ್ತವೆ ಹಾಗೂ ಕೃತಕ ಬುದ್ಧಿಮತ್ತೆಯ ವಿಕಸನ ಮತ್ತು ಅದು ಸಂಗ್ರಹಿಸಲ್ಪಟ್ಟ ಪ್ರೋಗ್ರಾಂಗಳಿಂದ ಹೇಗೆ ಭಿನ್ನವಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಕೆಲವು ಸಂಶೋಧನಾ ಡೆಮೋ ಕಾರ್ಯವಗಳನ್ನು ಕೂಡ ಪ್ರಸ್ತುತ ಪಡಿಸಲಾಯಿತು.

ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ-ಧಾರವಾಡ ಇದರ ಸಹಾಯಕ ಪ್ರೊಫೆಸರ್ ಡಾ. ಕೆ.ಟಿ. ದೀಪಕ್ ಅವರು ರೀಸೆಂಟ್ ಟ್ರೆಂಡ್ ಇನ್ ಸ್ಪೀಚ್ ಸಿಗ್ನಲ್ ಪ್ರೊಸೆಸಿಂಗ್ ಕುರಿತು ಮಾತನಾಡಿದರು.

ಈ ವೇಳೆ ಡಾ. ಕೆ.ಪ್ರಭುಶೆಟ್ಟಿ, ಪ್ರೊ.ಅನಿತಾ ಪಾಟೀಲ್. ಪ್ರೊ.ಶಿಲ್ಪಾ ಭೈರನಹಟ್ಟಿ ಮೊದಲಾದವರು ಉಪಸ್ಥಿತರಿದ್ದರು.

INAUGURATION,ONE DAY SEMINAR, ON “ARTIFICIAL INTELLIGENCE”

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ