ಬೆಂಗಳೂರು:ಫೆ-17; ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ನೀಡಿರುವ ಹೇಳಿಕೆಗೆ ಹಿರಿನ ನಟ ಅಂಬರೀಶ್ ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್ ಗೆ ಹೋಗಲಿ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅಂಬರೀಶ್, ಸುಪ್ರೀಂ ಕೋರ್ಟ್ ತ್ರಿಸದಸ್ಯ ನೀಡಿರುವ ತೀರ್ಪಿನಿಂದ ತಮಿಳುನಾಡು ರೈತರಿಗೆ ಅನ್ಯಾಯವಾಗಿದೆ. ರೈತರಿಗೆ ಮಾರಕವಾಗಿರುವ ತೀರ್ಪು ಪುನರ್ ಪರಿಶೀಲನೆಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಬೇಕೆಂಬ ರಜನಿಕಾಂತ್ ಹೇಳಿಕೆಗೆ ಅಂಬರೀಶ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಸುಪ್ರೀಂ ನೀಡಿರುವ ತೀರ್ಪು ಬಹಳ ವರ್ಷಗಳ ಬಳಿಕ ಬಂದ ಒಳ್ಳೆಯ ತೀರ್ಪು. ಬಹಳ ವರ್ಷ ನಮಗೆ ವಿರುದ್ಧವಾಗಿಯೇ ಆದೇಶ ಬಂದಿತ್ತು. ಈಗ ಸುಪ್ರೀಂ ನೀಡಿರುವ ತೀರ್ಪು ರಾಜ್ಯಕ್ಕೆ ಸ್ವಲ್ಪ ಉಸಿರುಕೊಟ್ಟಿದೆ ಎಂದಿದ್ದಾರೆ.
ಅಲ್ಲದೇನೀರಾವರಿ ಪ್ರದೇಶ ಹೆಚ್ಚಳಕ್ಕೂ ಅವಕಾಶ ಸಿಕ್ಕಿದೆ. ಆದರೆ ಹೆಚ್ಚುವರಿ ಪ್ರದೇಶ ಮಾಡಿದರೆ ಸಾಲದು. ಅದಕ್ಕೂ ನೀರು ಹೇಗೆ ಎಂಬುದು ಬೇಕಲ್ಲ. ಇನ್ನು ಮೊದಲು ಮಳೆಯಾಗಬೇಕು. ಆ ನಂತರ ಕಾವೇರಿ ಪ್ರಾಧಿಕಾರ ರಚಿಸಲಿ ಎಂದರು.
ಇದೇ ವೇಳೆ ಸೋಮವಾರ ಕೆ ಆರ್ ಎಸ್ ಗೆ ಪತ್ನಿ ಸುಮಲತಾ ಜತೆ ತೆರಳಿ ಬಾಗಿನ ಅರ್ಪಿಸುವುದಾಗಿ ಅಂಬರೀಶ್ ತಿಳಿಸಿದ್ದಾರೆ.
Cauvery verdict,Supreme Court,Rajinikanth,Ambareesh