ಮೇಘಾಲಯ ಗಣಿ ದುರಂತ : ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದ ಹಿನ್ನಲೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ನವದೆಹಲಿ: ಮೇಘಾಲಯ ಗಣಿ ದುರಂತದಲ್ಲಿ ಸಿಲುಕಿರುವ 15 ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಮೆಘಾಲಯ ಸರ್ಕಾರ ವಿಫಲಗೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಡಿ.13 ರಂದು ಕಾರ್ಮಿಕರು ಗಣಿ ದುರಂತದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲಗೊಂಡಿದೆ. ರಕ್ಷಣಾ ಕಾರ್ಯಾಚರಣೆ ನಮಗೆ ತೃಪ್ತಿ ತಂದಿಲ್ಲ. ಅವರು ಸತ್ತಿದ್ದಾರೋ, ಬದುಕಿದ್ದಾರೋ ಎಂಬುದೂ ತಿಳಿಯುತ್ತಿಲ್ಲ. ಇಷ್ಟು ದಿನಗಳಾದರೂ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಗಣಿಯೊಳಗೆ ಸಿಲುಕಿರುವವರನ್ನು ಹೊರ ತೆಗೆಯಲೇ ಬೇಕು. ದುರಂತದಲ್ಲಿ ಸಿಲುಕಿರುವ ಕಾರ್ಮಿಕರು ಸತ್ತಿದ್ದಾರೋ, ಬದುಕಿದ್ದಾರೋ ಗೊತ್ತಿಲ್ಲ. ಆದರೆ ಕಾರ್ಮಿಕರನ್ನು ಹೊರತೆಗೆಯಲೇಬೇಕು… ಕಾರ್ಮಿಕರು ಬದುಕುಳಿದು ಹೊರಬರಲಿ ಎಂದು ನಾವೂ ಕೂಡ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳಿದೆ.

ಲುಮಥರಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಡಿಸೆಂಬರ್ 13ರಂದು ದುರಂತವೊಂದು ಸಂಭವಿಸಿತ್ತು. ಸುಮಾರು 370 ಅಡಿ ಆಳದಲ್ಲಿ 15 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಸರ್ಕಾರ ಹರಸಾಹಸ ಪಡುತ್ತಿದೆ. ಭಾರತೀಯ ನೌಕಾಪಡೆಯ 14 ಸದಸ್ಯರು 72 ಎನ್’ಡಿಆರ್’ಎಫ್ ಯೋಧರು, 21 ಒಡಿಶಾ ಅಗ್ನಿಶಾಮಕ ದಳದ ಸಿಬ್ಬಂದಿಗಳು, 35 ಕೋಟ್ ಇಂಡಿಯಾ ಲಿಮಿಟೆಡ್ ಅದಿಕಾರಿಗಳು ಹಾಗೂ ಮೇಘಾಲಯ ಸ್ವಾಮ್ಯದ ರಾಜ್ಯ ವಿಪತ್ತು ನಿರ್ವಹಣೆಪಡೆಗಳ ತಂಡ ಸೇರಿ ಒಟ್ಟು 200ಕತ್ಕೂ ಹೆಚ್ಚು ತುರ್ತು ಕಾರ್ಯನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

Meghalaya mine,Supreme Court, “Dead Or Alive, They Should Be Taken Out”

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ