ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಪ್ರಕರಣ: ಸುಪ್ರೀಂ ಗೆ ವರದಿ ಸಲ್ಲಿಸಿದ ಸಿವಿಸಿ

ನವದೆಹಲಿ: ಸಿಬಿಐ ಆಂತರಿಕ ಕಲಹಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಲಂಚ ಸ್ವೀಕಾರ ಪ್ರಕರಣದ ಕುರಿತು ಕೇಂದ್ರ ಜಾಗೃತ ದಳ (ಸಿವಿಸಿ) ತನ್ನ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.

ಮುಚ್ಚಿದ ಲಕೋಟೆಯಲ್ಲಿ ಸಿವಿಸಿ ವರದಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್. ಕೆ. ಕೌಲ್ ಅವರನ್ನೊಳಗೊಂಡ ಪೀಠಕ್ಕೆ ಸಲ್ಲಿಸಿದೆ. ನ್ಯಾಯಪೀಠ ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ನಿಗದಿಪಡಿಸಿದೆ.

ಇದೇ ವೇಳೆ ಹಂಗಾಮಿ ಸಿಬಿಐ ನಿರ್ದೇಶಕರಾದ ನಾಗೇಶ್ವರ ರಾವ್ ತೆಗೆದುಕೊಂಡಿರುವ ನಿರ್ಧಾರದ ಕುರಿತ ವರದಿಯನ್ನು ಸಹ ಸಿವಿಸಿ ಕೋರ್ಟ್ ಗೆ ಸಲ್ಲಿಸಿದೆ. ಇನ್ನು ತನ್ನನ್ನು ಕರ್ತವ್ಯ ಭ್ರಷ್ಟನನ್ನಾಗಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಅಲೋಕ್ ವರ್ಮಾ ಸಲ್ಲಿಸಿದ ಅರ್ಜಿ ವಿಚಾರಣೆ ಸಹ ನವೆಂಬರ್ 16ಕ್ಕೆ ನಡೆಸುವುದಾಗಿ ಕೋರ್ಟ್ ತೀರ್ಮಾನಿಸಿದೆ.

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಹಾಗೂ ಅಲೋಕ್ ವರ್ಮಾ ನಡುವೆ ಸಂಘರ್ಷ ಏರ್ಪಟ್ಟ ಕಾರಣ ಕೇಂದ್ರ ಸರ್ಕಾರ ಅಲೋಕ್ ವರ್ಮಾ ಅವರನ್ನು ಕಳೆದ ತಿಂಗಳು ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿತ್ತು. ಅಲೋಕ್ ವರ್ಮಾ ಹಾಗೂ ಅಸ್ತಾನಾ ತಾವು ಪರಸ್ಪರ ಭ್ರಷ್ಠಾಚಾರ ಹಾಗೂ ಲಂಚ ಸ್ವೀಕಾರದ ಆರೋಪಗಳನ್ನು ಮಾಡಿಕೊಂಡಿದ್ದು ಸಿಬಿಐ ಆಂತರಿಕ ಕಲಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

CBI,Alok Verma,CVC,supreme court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ