ದೇಶದಲ್ಲಿ ಲಿಂಗ ತಾರತಮ್ಯ ಮುಂದುವರಿದಿದೆಯೇ..? ಹೌದು ಎನ್ನುತ್ತದೆ ಹೆಲ್ತಿ ಸ್ಟೇಟ್ಸ್ ಪ್ರೊ ಇಂಡಿಯಾ ಸಂಸ್ಥೆಯ ವರದಿ.

ನವದೆಹಲಿ, ಫೆ.17- ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳಲ್ಲಿ ಇಂದಿಗೂ ಕೂಡ ಲಿಂಗ ತಾರತಮ್ಯ ಮುಂದುವರಿದಿದ್ದು, ತಾರತಮ್ಯದಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಕರ್ನಾಟಕ ಏಳನೆ ಸ್ಥಾನ ದಕ್ಕಿಸಿಕೊಂಡಿದೆ.

ಹೆರಿಗೆಗೂ ಮುನ್ನವೇ ತಮಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವುದೇ ದೇಶದಲ್ಲಿ ಲಿಂಗ ತಾರತಮ್ಯ ಮಿತಿಮೀರಲು ಕಾರಣ ಎನ್ನಲಾಗಿದೆ.

ಗುಜರಾತ್‍ನಲ್ಲಿ 1000 ಪುರುಷರಿಗೆ 907 ಮಹಿಳೆಯರು ಮಾತ್ರ ಇದ್ದರು. ಲಿಂಗ ತಾರತಮ್ಯ ಹೆಚ್ಚಾದ ನಂತರ 1000 ಪುರುಷರಿಗೆ 854 ಮಹಿಳೆಯರು ಮಾತ್ರ ಎಂಬ ಅಂಶ ಬಹಿರಂಗಗೊಂಡಿದೆ.

ಲಿಂಗ ತಾರತಮ್ಯದಲ್ಲಿ ಗುಜರಾತ್ ಮೊದಲನೆ ಸ್ಥಾನ ಪಡೆದುಕೊಂಡಿದ್ದರೆ, ರಾಜಸ್ಥಾನ ಎರಡು, ಉತ್ತರಖಂಡ್ ಮೂರು, ಮಹಾರಾಷ್ಟ್ರ ನಾಲ್ಕು, ಹಿಮಾಚಲ ಪ್ರದೇಶ ಐದು, ಛತ್ತೀಸ್‍ಗಢ ಆರು ಹಾಗೂ ಕರ್ನಾಟಕ ಏಳನೆ ಸ್ಥಾನ ಪಡೆದುಕೊಂಡಿದೆ.

ದೇಶದಲ್ಲಿ ಇಂದಿಗೂ ಹೆಣ್ಣು ಮಕ್ಕಳ ಜನನದ ಬಗ್ಗೆ ಜನರಲ್ಲಿ ಅಸಡ್ಡೆ ಮುಂದುವರಿದಿರುವುದಕ್ಕೆ ಈ ವರದಿಯೇ ಸಾಕ್ಷಿ. ಸರ್ಕಾರಗಳು ಕೂಡಲೇ ಹೆರಿಗೆಗೂ ಮುನ್ನ ಗಂಡೋ ಹೆಣ್ಣೋ ಎಂಬುದನ್ನು ಪರೀಕ್ಷಿಸುವುದನ್ನು ನಿಷೇಧಿಸಬೇಕು.

ಅಕ್ರಮವಾಗಿ ಡಯಾಗ್ನೈಸ್ ಮಾಡುವ ಖಾಸಗಿ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಲಿಂಗಾನುಪಾತ ಭೀಕರತೆಗೆ ತಲುಪಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

 

(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ