ಹೊಸದಿಲ್ಲಿ: ದೇಶ ಪ್ರೇಮ ಎಂಬುದು ನಿಜವಾದ ಹಿಂದೂಗಳ ಲಕ್ಷಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದ್ದಾರೆ.
ಜೆ.ಕೆ.ಬಜಾಜ್ ಹಾಗೂ ಎಂ.ಡಿ.ಶ್ರೀನಿವಾಸ್ ರಚಿಸಿರುವ, ಮೇಕಿಂಗ್ ಆಫ್ ಎ ಹಿಂದೂ ಪೇಟ್ರಿಯಾಟ್: ಬ್ಯಾಕ್ಗ್ರೌಂಡ್ ಆಫ್ ಗಾಂೀಜಿಸ್ ಹಿಂದ್ ಸ್ವರಾಜ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಪ್ರೇಮವು ನನ್ನ ಧರ್ಮದ ಭಾಗವಾಗಿದೆ ಎಂದು ಗಾಂೀಜಿಯವರು ಹೇಳಿದ್ದರು. ಧರ್ಮವು ಧರ್ಮಕ್ಕಿಂತ ವಿಶಾಲವಾಗಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ಮಹಾತ್ಮ ಗಾಂೀಜಿಯವರನ್ನು ಆರ್ಎಸ್ಎಸ್ ಸ್ವಂತ ಮಾಡಿಕೊಳ್ಳುತ್ತಿದೆ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಆದರೆ, ಗಾಂೀಜಿಯವರಂತಹ ಮಹಾನ್ ವ್ಯಕ್ತಿಗಳನ್ನು ಯಾರೂ ಸ್ವಾೀನ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ದೇಶಪ್ರೇಮವು ಪ್ರತಿಯೊಬ್ಬ ಹಿಂದೂವಿನ ಲಕ್ಷಣವಾಗಿದೆ. ಹಾಗಂತ ದೇಶ ಪ್ರೇಮ ಎಂದರೆ ಬರೀ ದೇಶದ ನೆಲವನ್ನು ಪ್ರೀತಿಸುವುದಲ್ಲ. ಈ ದೇಶದ ಸಂಸ್ಕøತಿ, ಸಂಪ್ರದಾಯ, ಆಚಾರ-ವಿಚಾರ ಸೇರಿ ಎಲ್ಲವನ್ನೂ ಪ್ರೀತಿಸುವುದಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ನಾಗರಿಕತೆ ಮೌಲ್ಯಗಳ ಆಧಾರದ ಮೇಲೆ ದೇಶವನ್ನು ಸ್ವರಾಜ್ಯಗೊಳಿಸುವುದು ಮಹಾತ್ಮ ಗಾಂೀಜಿಯವರ ಕನಸಾಗಿತ್ತು. ಅದರಂತೆ ಮುನ್ನಡೆಯುವುದು ಆದ್ಯತೆಯಾಗಲಿ ಎಂದು ಹೇಳಿದ್ದಾರೆ.