ಲೈಟ್ ಹೌಸ್ ಯೋಜನೆಗೆ ಮೋದಿ ಶಿಲಾನ್ಯಾಸ ಬಡವರಿಗೆ ಕೈಗೆಟುಕುವ ದರದಲ್ಲಿ ಸ್ವಂತ ಮನೆ

ಹೊಸದಿಲ್ಲಿ: 2022ರ ವೇಳೆಗೆ ಎಲ್ಲರಿಗೂ ಸೂರು ಕಲ್ಪಿಸುವ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಲೈಟ್ ಹೌಸ್ ಯೋಜನೆಯಲ್ಲಿ ಬಡವರಿಗೆ ಕೈಗೆಟುಕುವ ದರದಲ್ಲಿ ಸ್ವಂತ ಮನೆಗಳನ್ನು ದೊರಕಿಸಲಾಗುತ್ತದೆ. ಅದೇ ರೀತಿ ವಲಸೆ ಕಾರ್ಮಿಕರಿಗೆ ಸಹ ಬಾಡಿಗೆ ವಸತಿ ಒದಗಿಸುವ ಬಗೆಗೂ ಸರ್ಕಾರ ಗಮನ ಹರಿಸಿದೆ ಎಂದಿದ್ದಾರೆ.
ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ಕೇಂದ್ರ ಮಹತ್ವಾಕಾಂಕ್ಷಿಯ ಲೈಟ್ ಹೌಸ್ ಯೋಜನೆಗೆ ವಿಡಿಯೋ ಕಾನರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು.
ದೇಶದ ಜನರಲ್ಲಿ ಕಳೆದ 6 ವರ್ಷಗಳಲ್ಲಿ ಕೇಂದ್ರ ತನ್ನ ನೀತಿಗಳ ಕುರಿತ ನಂಬಿಕೆಯನ್ನು ಪುನಃಸ್ಥಾಪಿಸಿದ್ದು, ಈಗ ಲೈಟ್ ಹೌಸ್ ಯೋಜನೆಗಳಲ್ಲಿ ಮನೆಯನ್ನು ಸ್ವಂತವಾಗಿಸಿಕೊಳ್ಳಬಹುದಾಗಿದೆ. ಒಂದೊಮ್ಮೆ ಕಟ್ಟಡ ನಿರ್ಮಾಣಕಾರರು (ಬಿಲ್ಡರ್ಸ್) ಸಮಯಕ್ಕೆ ಸರಿಯಾಗಿ ಮನೆ ನಿರ್ಮಿಸಿಕೊಡದಿದ್ದಲ್ಲಿ ಜನರಿಗೆ ಕಾನೂನಿನ ಬೆಂಬಲವೂ ಇದೆ ಎಂದು ಮೋದಿ ತಿಳಿಸಿದ್ದಾರೆ.
ಜೀವನವಿಡೀ ಉಳಿತಾಯ ಮಾಡಿದ ಎಲ್ಲವನ್ನೂ ನೀಡಿದ ಬಳಿಕವೂ ಸ್ವಂತ ಮನೆ ಮಾಡುವ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದರು. ಮನೆಗಳು ಕೇವಲ ಕಾಗದಗಳಲ್ಲಿಯೇ ಉಳಿದಿದ್ದು , ಬಿಲ್ಡರ್ ವಿರುದ್ಧ ಹೋರಾಟ ನಡೆಸಲು ದೇಶದ ಕಾನೂನು ತಮಗೆ ಸಹಾಯಕವಾಗುವದರ ಬಗ್ಗೆಯೂ ನಂಬಿಕೆಯನ್ನು ಕಳೆದುಕೊಂಡಿದ್ದರು. ಸ್ವಂತ ಸೂರು ತಮ್ಮದಾಗಿಸಿಕೊಳ್ಳಲು ಅವಿರತ ದುಡಿಯುತ್ತಿರುವ ಮಧ್ಯಮ ಹಾಗೂ ಬಡ ಕುಟುಂಬಗಳಿಗಾಗಿ ಈ ಹಾದಿಯಲ್ಲಿದ್ದ ಎಲ್ಲ ಅಡಚಣೆಗಳನ್ನು ತಮ್ಮ ಸರ್ಕಾರ ನಿವಾರಿಸಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ