ಹೊಸದಿಲ್ಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟದ ಜೊತೆಗೆ ಯೂರೋಪಿಯನ್ ದೇಶಗಳಲ್ಲೀಗ ಇನ್ನೊಂದು ಹೋರಾಟ ಆರಂಭವಾಗಿದೆ. ಹಕ್ಕಿಜ್ವರ ಆತಂಕದಲ್ಲಿರುವ ಆ ದೇಶಗಳು ಸಾವಿರಾರು ಕೋಳಿಗಳನ್ನು ಕೊಲ್ಲುತ್ತಿದ್ದಾರೆ.
ಎಚ್5ಎನ್8 ಹಕ್ಕಿಜ್ವರವು ಸಾರ್ವಜನಿಕರ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆ ಕಾರಣ ದೇಶಾದ್ಯಂತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ (ಪಿಎಚ್ಇ) ವಿಭಾಗವು ತಿಳಿಸಿದೆ.
ಉತ್ತರ ಕ್ರೋಶಿಯಾದ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಎಚ್5ಎನ್8 ಹಕ್ಕಿ ಜ್ವರವು ಸೋಟಗೊಂಡಿರುವುದಾಗಿ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ(ಒಐಎಲ್) ಬುಧವಾರ ತಿಳಿಸಿದೆ.
ಕೊಪ್ರಿವಿನ್ಸಿಕೊ-ಕ್ರೈಝೆವಾಕಾ ಪ್ರದೇಶದಲ್ಲಿ ಹಕ್ಕಿ ಜ್ವರದ ಸೋಟದಿಂದಾಗಿ 4,315 ಹಕ್ಕಿಗಳನ್ನು ಕೊಲ್ಲಲಾಗಿದೆ ಎಂದು ಕ್ರೋಶಿಯಾ ಕೃಷಿ ಸಚಿವಾಲಯವನ್ನು ಉಲ್ಲೇಖಿಸಿ ಒಐಎಲ್ ತಿಳಿಸಿದೆ.