ಬಿಜೆಪಿ ಹೊರಗಿನವರ ಪಕ್ಷ, ಪ.ಬಂ.ದಲ್ಲಿ ಇಲ್ಲ ಅವಕಾಶ: ಮಮತಾ ಹೊಸ ವರಸೆ

ಕೋಲ್ಕತ:ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ತನಗೆ ಭಾರೀ ಸವಾಲಾಗಿರುವುದರಿಂದ ತೀವ್ರ ಹತಾಶೆಗೀಡಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದೀಗ ಬಿಜೆಪಿ ಹೊರಗಿನವರ ಪಕ್ಷ, ಪ.ಬಂ.ದಲ್ಲಿ ಬಿಜೆಪಿಗೆ ಇಲ್ಲ ಅವಕಾಶ ಎಂದು ಹೊಸ ವರಸೆ ತೆಗೆದಿದ್ದಾರೆ.
ಪ.ಬಂ. “ಹಿಂಸಾಗ್ರಸ್ತ ಗುಜರಾತ್ “ಆಗಲು ಎಂದೂ ಅವಕಾಶ ನೀಡದು ಎಂಬುದಾಗಿ ತೃಣಮೂಲ ಕಾಂಗ್ರೆಸ್ ವರಿಷ್ಠರಾಗಿರುವ ಮಮತಾ ಹೇಳುವ ಮೂಲಕ ರಾಜ್ಯದ ಜನತೆ ಬಿಜೆಪಿಯತ್ತ ವಾಲುತ್ತಿರುವುದನ್ನು ತಡೆಯಲು ಶತಾಯಗತಾಯ ಹೆಣಗಾಟ ನಡೆಸುತ್ತಿದ್ದಾರೆ.
ದೇಶದ ಗಡಿಗಳಲ್ಲಿನ ಸ್ಥಿತಿ ಉತ್ತಮವಾಗಿಲ್ಲ. ಆದಾಗ್ಯೂ ಕೇಂದ್ರ ಗೃಹಸಚಿವ ಅಮಿತ್ ಶಾ ಯಾಕೆ ಪ.ಬಂ.ದ ಚುನಾವಣೆಯಲ್ಲಿ ಮಗ್ನರಾಗಿದ್ದಾರೆ ಎಂದು ಪ್ರಶ್ನಿಸಿದ ಮಮತಾ, ತಾನು ತನ್ನ ರಾಜಕೀಯ ಜೀವನದಲ್ಲಿ ಇಂತಹ ಒಬ್ಬ ಗೃಹಸಚಿವರನ್ನು ಹಿಂದೆಂದೂ ಕಂಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿಯು ಇತ್ತೀಚೆಗೆ ರಾಜ್ಯದಲ್ಲಿ ಚುನಾವಣಾ ಸಿದ್ಧತೆಗಾಗಿ ಐದು ಸಂಘಟನಾತ್ಮಕ ವಲಯಗಳನ್ನು ರೂಪಿಸಿದ್ದು, ವಿವಿಧ ಬಿಜೆಪಿ ನಾಯಕರಿಗೆ ಇದರ ಹೊಣೆಯನ್ನು ವಹಿಸಿತ್ತು. ಇದರಿಂದ ತೀವ್ರ ಆತಂಕಿತರಾಗಿರುವ ಮಮತಾ , ಬಿಜೆಪಿ ಪ.ಬಂ.ವನ್ನು ಗುಜರಾತಾಗಿ ಮಾರ್ಪಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ