ಟ್ವಿಟರ್‍ಗೆ ಪರ್ಯಾಯ ದೇಶಿಯ ಟೂಟರ್

ಹೊಸದಿಲ್ಲಿ:ತಂತ್ರಜ್ಞಾನ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವಂತೆ ನವೋದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬಳಿಕ ವಿದೇಶಿ ಅಪ್ಲಿಕೇಶನ್‍ಗಳಿಗೆ ಪರ್ಯಾಯವಾಗಿ ದೇಶಿಯ ಆ್ಯಪ್‍ಗಳನ್ನು ಅಭಿವೃದ್ಧಿ ಪಡಿಸುತ್ತಿರುವ ನಡುವೆಯೇ, ಪ್ರಸಿದ್ಧ ಜಾಲತಾಣ ಟ್ವಿಟರ್‍ಗೆ ಬದಲಾಗಿ ಟೂಟರ್ ಎಂಬ ದೇಶಿ ಆ್ಯಪ್ ಕೂಡ ಬಿಡುಗಡೆಗೊಂಡಿದೆ.
ಅಮೆರಿಕ ಮೂಲದ ಟ್ವಿಟರ್ ಬಳಕೆಯೊಂದಿಗೆ ಡಿಜಿಟಲ್ ಕ್ಷೇತ್ರದಲ್ಲಿ ಸಂಪೂರ್ಣ ವಿದೇಶವನ್ನು ಅವಲಂಬಿಸಿರುವುದು, ಈ ಹಿಂದೆ ಇದ್ದ ವಸಹಾತು ಶಾಹಿ ಆಡಳಿತಕ್ಕಿಂತ ಭಿನ್ನವಾಗಿಲ್ಲ. ಈ ಪರಿಸ್ಥಿತಿ ಬದಲಿಸಲು ಭಾರತಕ್ಕೆ ತನ್ನದೇ ಆದ ಸ್ವದೇಶಿ ಸಾಮಾಜಿಕ ಜಾಲತಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಟ್ವಿಟರ್ ಬದಲಾಗಿ, ಟೂಟರ್ ಎಂಬ ನೂತನ ಆ್ಯಪನ್ನು ಪರಿಚಯಿಸಿ ಆಂದೋಲನ ಆರಂಭಿಸಿದ್ದೇವೆ ನಮ್ಮೊಂದಿಗೆ ನೀವು ಕೈ ಜೋಡಿಸಿ ಎಂದು ಟೂಟರ್ ವೆಬ್‍ಸೈಟ್‍ನಲ್ಲಿ ತಿಳಿಸಲಾಗಿದೆ.
ಟೂಟರ್‍ನ ಕೇಂದ್ರ ಕಚೇರಿ ತೆಲಂಗಾಣದ ಬರುಗುಡೇಮ್‍ನಲ್ಲಿದು, ಸ್ವದೇಶಿ ಪ್ರತೀಕದಂತೆ ಮಹಾಭಾರತದಲ್ಲಿ ಶ್ರೀಕೃಷ್ಣ ಬಳಸುವ ಶಂಖದ ಗುರುತನ್ನು ಆ್ಯಪ್‍ನ ಲೋಗೋವಾಗಿ ಬಳಕೆಮಾಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ನಟ ಅಭಿಷೇಕ್ ಬಚ್ಚನ್, ಕ್ರಿಕೆಟ್ ಆಟಗಾರ ವಿರಾಟ್ ಕೋಹ್ಲಿ ಸೇರಿ ಹಲವರು ಟೂಟರ್‍ನಲ್ಲಿ ಖಾತೆ ಹೊಂದಿದ್ದು,ಪ್ಲೇ ಸ್ಟೋರ್‍ನಲ್ಲಿ ಆ್ಯಪ್ ಲಭ್ಯವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ