ವಾಷಿಂಗ್ಟನ್: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವಾಣಿಜ್ಯ ಅಂಗಸಂಸ್ಥೆ ಆ್ಯಂಟ್ರಿಕ್ಸ್ ಕಾಪೆರ್ರೇಷನ್ ಸ್ಯಾಟಲೈಟ್ ಒಪ್ಪಂದ ರದ್ದುಗೊಳಿಸಿದಕ್ಕಾಗಿ ಬೆಂಗಳೂರು ಮೂಲದ ನವೋದ್ಯಮಕ್ಕೆ 1.2 ಶತಕೋಟಿ ಡಾಲರ್ ಪರಿಹಾರ ನೀಡಬೇಕೆಂದು ಅಮೆರಿಕದ ನ್ಯಾಯಾಲಯವೊಂದು ಶುಕ್ರವಾರ ಆದೇಶಿಸಿದೆ.
2005ರಲ್ಲಿ ಆ್ಯಂಟ್ರಿಕ್ಸ್ ಮತ್ತು ಬೆಂಗಳೂರಿನ ದೇವಸ್ ಮಲ್ಟಿಮೀಡಿಯಾ ಒಪ್ಪಂದವಾಗಿತ್ತು. ಆದರೆ, 2011ರಲ್ಲಿ ಆ್ಯಂಟ್ರಿಕ್ಸ್ ಒಪ್ಪಂದ ರದ್ದುಗೊಳಿಸಿದ್ದು, ದೇವಸ್ ಭಾರತದ ವಿವಿಧ ಕೋರ್ಟ್ಗಳ ಮೊರೆಹೋಗಿತ್ತು. ಈ ಪೈಕಿ ಸುಪ್ರೀಂಕೋರ್ಟ್ಗೂ ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ಕೋರ್ಟ್ ನ್ಯಾಯಾೀಕರಣಕ್ಕೆ ವರ್ಗಾಯಿಸಿತ್ತು.
ತದನಂತರ ದೇವಸ್ ಮಲ್ಟಿಮೀಡಿಯಾ ಅಮೆರಿಕ ಜಿಲ್ಲಾ ಕೋರ್ಟ್ನಲ್ಲಿ ಆ್ಯಂಟ್ರಿಕ್ಸ್ ವಿರುದ್ಧ ದಾವೆ ಹೂಡಿದ್ದು, 3 ಪ್ರತ್ಯೇಕ ಅಂತಾರಾಷ್ಟ್ರೀಯ ನ್ಯಾಯಾೀಕರಣಗಳು ಹಾಗೂ 9 ವಿವಿಧ ಸಂಧಾನಕಾರರು ಆ್ಯಂಟ್ರಿಕ್ಸ್ ಏಕಾಏಕಿ ಒಪ್ಪಂದ ರದ್ದುಗೊಳಿಸಿದ್ದನ್ನು ತಪ್ಪು ಎಂದು ಕರೆದಿರುವುದಾಗಿ ತಿಳಿಸಿತ್ತು. ಅಲ್ಲದೇ ಈ ಸಂಬಂಧ 2018ರಲ್ಲಿ ಆ್ಯಂಟ್ರಿಕ್ಸ್ ತನ್ನ ವಿರುದ್ಧ ದಾಖಲಾಗಿರುವ ದಾವೆಯನ್ನು ವಜಾಗೊಳಿಸುವಂತೆ ಕೋರಿದ್ದು, ಕೋರ್ಟ್ಗೆ ಪ್ರಕರಣ ನಿರ್ಣಯಿಸುವ ಅಕಾರ ವ್ಯಾಪ್ತಿಯಿಲ್ಲ ಎಂದು ಅರ್ಜಿ ಸಲ್ಲಿಸಿತ್ತು.
ಇನ್ನು ಪ್ರಕರಣ ಸಂಬಂಧ ತನಗೆ ಅಕಾರ ವ್ಯಾಪ್ತಿ ಇರುವುದಾಗಿ ತಿಳಿಸಿದ ಕೋರ್ಟ್, ಒಟ್ಟು 1.2 ಶತಕೋಟಿ ಡಾಲರ್ ಪರಿಹಾರ ನೀಡಬೇಕೆಂದು ಸೂಚಿಸಿದೆ.