ಮುಸ್ಲಿಂ ದೇಶಗಳಿಂದ ಆಗಮನಕ್ಕೆ ಬೈಡನ್ ಆಹ್ವಾನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಅಕಾರ ವಹಿಸಿಕೊಳ್ಳುತ್ತಿದ್ದಂತೆ ಜೋ ಬೈಡನ್ ಅವರು ಹಲವು ಪ್ರಮುಖ ನಿರ್ಧಾರಗಳ ಜಾರಿಗೆ ಸಹಿ ಹಾಕಿದ್ದಾರೆ.
ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳುವುದು, ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಮೆರಿಕ ಸೇರ್ಪಡೆಗೆ ಕ್ರಮ, ಬಹುಸಂಖ್ಯಾತ ಮುಸ್ಲಿಂ ದೇಶಗಳಿಂದ ಆಗಮನ ನಿಷೇಧ ಕೊನೆಗೊಳಿಸುವುದು, ಪರಿಸರ ಸಂರಕ್ಷಣೆ ಕ್ರಮಗಳನ್ನು ಹೆಚ್ಚಿಸುವುದು, ಕೊರೋನಾ ವಿರುದ್ಧದ ಹೋರಾಟ ಬಲಪಡಿಸುವ ಕ್ರಮಗಳು ಬೈಡನ್ ಸಹಿ ಮಾಡಿದ ಆದೇಶಗಳಲ್ಲಿ ಸೇರಿವೆ.
ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣ ಸ್ಥಗಿತ ಮತ್ತು ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ವೈವಿಧ್ಯಮಯ ಅವಕಾಶ ಮತ್ತು ಸಮಾನತೆ ವಿಸ್ತರಿಸುವ ಯತ್ನಗಳು ಆದೇಶಗಳಲ್ಲಿ ಸೇರಿವೆ.
ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕಾರ ಅವಯಲ್ಲಿ ಕೈಗೊಂಡ ನಿರ್ಣಯಗಳನ್ನು ಬೈಡನ್ ಕೈಬಿಡುತ್ತಿರುವುದು ಸ್ಪಷ್ಟವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ