ಕೃಷಿ ಸುಧಾರಣೆಗಳಿಗೆ ಹೊಸ ಕಾಯ್ದೆಗಳು ಸಹಾಯಕ: ಐಎಂಎಫ್

ವಾಷಿಂಗ್ಟನ್: ಕೃಷಿ ಸುಧಾರಣೆಗಳಿಗೆ ಗಮನಾರ್ಹ ಕ್ರಮಗಳನ್ನು ತರಲುವಲ್ಲಿ ಭಾರತ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಸಹಾಯಕವಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ವಿಶ್ವಾಸ ವ್ಯಕ್ತಪಡಿಸಿದೆ.
ಇದೇ ವೇಳೆ ಹೊಸ ವ್ಯವಸ್ಥೆಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ ಅದಕ್ಕೆ ವ್ಯತಿರಿಕ್ತ ಪರಿಣಾಮ ಬೀರುವಂತಹವರಿಂದ ರಕ್ಷಿಸಲು ಸಾಮಾಜಿಕ ಸುರಕ್ಷತಾ ಜಾಲದ ಅಗತ್ಯವಿದೆ ಎಂದು ಸಹ ಐಎಂಎಫ್ ಅಭಿಪ್ರಾಯ ಪಟ್ಟಿದೆ.
ಭಾರತ ಸರ್ಕಾರ ಜಾರಿಗೊಳಿಸಿರುವ ಹೊಸ ಕಾಯ್ದೆಗಳು ಮಧ್ಯವರ್ತಿಯ ಪಾತ್ರವನ್ನು ಕುಗ್ಗಿಸಲಿದೆ. ಅಲ್ಲದೆ, ಕೃಷಿ ವಲಯದಲ್ಲಿ ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಐಎಂಎಫ್‍ನಲ್ಲಿ ಸಂವಹನ ನಿರ್ದೇಶಕರಾಗಿರುವ ಗೆರ್ರಿ ರೈಸ್ ತಿಳಿಸಿದ್ದಾರೆ.
ನೂತನ ಕ್ರಮಗಳು ರೈತರು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕ ಹೊಂದಲು ಅನುವು ಮಾಡಿಕೊಡಲಿದೆ. ಜತೆಗೆ ಮಧ್ಯವರ್ತಿಯ ಪಾತ್ರವನ್ನು ಕಡಿಮೆಗೊಳಿಸುವ ಮೂಲಕ ರೈತರು ಹೆಚ್ಚು ಆದಾಯ ಗಳಿಸಲು ಸಹಾಯಕವಾಗಿ ಗ್ರಾಮೀಣಾಭಿವೃದ್ಧಿಯನ್ನು ಬೆಂಬಲಿಸಲಿದೆ . ಇದರೊಂದಿಗೆ ಹೊಸ ಸುಧಾರಣೆಗಳು ವಿಫುಲ ಉದ್ಯೋಗ ಸೃಷ್ಟಿಗೂ ಅವಕಾಶವನ್ನು ಕಲ್ಪಿಸುತ್ತದೆ ಎಂದು ಎಂದು ರೈಸ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ