ಅಮೆರಿಕಾ ರಾಜಧಾನಿ ವಾಷಿಂಗ್ಟನ್‍ನಲ್ಲಿ ಧಾರಾಕಾರ ಮಳೆ-ಸಂಕಷ್ಟಕ್ಕೆ ಸಿಲುಕಿದ ಸಹಸ್ರಾರು ಮಂದಿ

ವಾಷಿಂಗ್ಟನ್, ಜು.9-ಅಮೆರಿಕ ರಾಜಧಾನಿ ವಾಷಿಂಗ್ಟನ್‍ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಹಸ್ರಾರು ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮೆರಿಕ ರಾಷ್ಟ್ರಾಧ್ಯಕ್ಷರ ಆಡಳಿತ ಕಚೇರಿ ಮತ್ತು ಅಧಿಕೃತ ನಿವಾಸ ವೈಟ್‍ಹೌಸ್ ಜಲಾವೃತವಾಗಿದೆ.

ಹಠಾತ್ ಮಳೆಯಿಂದ ರಾಜಧಾನಿ ಜನರು ಕಂಗೆಟ್ಟಿದ್ದು, ಬಹುತೇಕ ರಸ್ತೆಗಳ ಮೇಲೆ ನೀರು ನಿಂತಿದ್ದು, ಅನೇಕ ವಾಹನಗಳು ಭಾಗಶಃ ಮುಳುಗಡೆಯಾಗಿವೆ. ದೋಣಿಗಳ ಮೂಲಕ ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಾಹನಗಳು, ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಅಮೆರಿಕನ್ನರು ಪರಿತಪಿಸುವಂತಾಯಿತು.

ಶ್ವೇತಭವನದ ನೆಲ ಮಾಳಿಗೆ ಸಂಪೂರ್ಣ ಜಲಾವೃತವಾಗಿದ್ದು, ವೈಟ್‍ಹೌಸ್ ಮೆಟ್ಟಿಲುಗಳವರೆಗೆ ನೀರು ನಿಂತಿದೆ.

ಮಳೆಯಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡುವಂತಾಯಿತು.

ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ