ಐತಿಹಾಸಿಕ ಗೆಲುವಿನ ಸನಿಹದಲ್ಲಿ ಬಿಡೆನ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಲ್ಲಿ ನಿರ್ಣಾಯಕ ಮುನ್ನಡೆಯನ್ನು ಸಾಸಿದ್ದು , ಬಿಡೆನ್ ಅವರು ಐತಿಹಾಸಿಕ ಗೆಲುವಿನ ಸನಿಹದಲ್ಲಿದ್ದಾರೆ.
ಜಾರ್ಜಿಯಾದಲ್ಲಿ ಬಿಡೆನ್ ಅವರು ಟ್ರಂಪ್ ವಿರುದ್ಧ ಕೇವಲ 1096 ಮತಗಳಿಂದ ಮುನ್ನಡೆ ಸಾಸಿದ್ದಾರೆ. ಇದೇ ವೇಳೆ ಪೆನ್ಸಿಲ್ವೇನಿಯಾದಲ್ಲಿ ಬಿಡೆನ್ ತಮ್ಮ ಎದುರಾಳಿಗಿಂತ 5,587 ಮತಗಳಿಂದ ಮುಂದಿದ್ದಾರೆ. ಬುಧವಾರ ರಾತ್ರಿಯವರೆಗೂ 70,000ಗಳಿಗಿಂತಲೂ ಹೆಚ್ಚು ಮತಗಳೊಂದಿಗೆ ಟ್ರಂಪ್ ಮುನ್ನಡೆಯನ್ನು ಸಾಸಿದ್ದ ರಾಜ್ಯದಲ್ಲಿ ಬಿಡೆನ್ ಗಮನಾರ್ಹಕ ರೀತಿಯಲ್ಲಿ ಮುನ್ನಡೆಯಲ್ಲಿದ್ದಾರೆ.
ಆರಿಜೋನಾ ಮತ್ತು ನೆವಡಾದಲ್ಲಿಯೂ ಬಿಡೆನ್ ಅಲ್ಪ ಮಟ್ಟದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷರನ್ನಾಗಿ ಘೋಷಿಸಲು ಇಬ್ಬರೂ ಅಭ್ಯರ್ಥಿಗಳಿಗೆ 538 ಎಲೆಕ್ಟೋರಲ್ ಕಾಲೇಜ್ ಮತಗಳಲ್ಲಿ 270 ಮತಗಳ ಅಗತ್ಯವಿದೆ.
ಡೆಮಾಕ್ರಟಿಕ್ ಅಭ್ಯರ್ಥಿ ಬಿಡೆನ್ 264 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದು ಮುಂದಿದ್ದರೆ, ಅಧ್ಯಕ್ಷ ಟ್ರಂಪ್ 214 ಮತಗಳೊಂದಿಗೆ ಅಧ್ಯಕ್ಷೀಯ ಚುನಾವಣಾ ಓಟದಲ್ಲಿ ಹಿಂದಿದ್ದಾರೆ.
ಅಮೆರಿಕ ಚುನಾವಣೆಯಲ್ಲಿ ಅಭ್ಯರ್ಥಿಯ ಭವಿಷ್ಯವನ್ನು ರಾಜ್ಯಗಳ ಮತದಾನದ ಫಲಿತಾಂಶವೇ ನಿರ್ಧರಿಸುವುದಾಗಿದೆ. ಅದರಂತೆ, ಪ್ರತಿ ಅಮೆರಿಕ ರಾಜ್ಯವು ನಿರ್ದಿಷ್ಟ ಸಂಖ್ಯೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಭಾಗಶಃ ಜನಸಂಖ್ಯೆಯ ಗಾತ್ರವನ್ನು ಆಧರಿಸಿ ಪಡೆಯುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ