ಹೊಸದಿಲ್ಲಿ: ಲಡಾಖ್ನ್ನು ಚೀನಾದ ಭಾಗವೆಂದು ತೋರಿಸಿದ ಟ್ವಿಟರ್ ಇಂಡಿಯಾ, ಈ ಬಗ್ಗೆ ನೀಡಿರುವ ಉತ್ತರ ಅಸಮರ್ಪಕವಾಗಿದೆ ಎಂದು ದತ್ತಾಂಶ ಸಂರಕ್ಷಣೆ ಬಗೆಗಿನ ಸಂಸದರ ಸಮಿತಿಯು ಬುಧವಾರ ತಿಳಿಸಿದೆ.
ಟ್ವಿಟರ್ನಿಂದಾದ ಈ ಅಚಾತುರ್ಯವು ಬಹುದೊಡ್ಡ ವಿವಾದಕ್ಕೆ ಎಡೆಯಾದ ಹ್ನಿನೆಲೆ ದತ್ತಾಂಶ ಸಂರಕ್ಷಣೆಯ ಸಂಸದೀಯ ಜಂಟಿ ಸಮಿತಿಯು ಟ್ವಿಟರ್ ಇಂಡಿಯಾ ಅಕಾರಿಗಳನ್ನು ತರಾಟೆ ತೆಗೆದುಕೊಂಡಿತ್ತು.
ಟ್ವಿಟರ್ ನೀಡಿರುವ ಸ್ಪಷ್ಟನೆಯು ಅಸಮಪರ್ಕವಾಗಿದೆ ಎಂದು ಸಮಿತಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಲಡಾಖ್ ಚೀನಾದ ಪೀಪಲ್ಸ್ ಆರ್ಮಿಯ ಭಾಗ ಎಂದು ಟ್ವಿಟರ್ ಇಂಡಿಯಾ ತೋರಿಸಿರುವುದು ಕ್ರಿಮಿನಲ್ ಅಪರಾಧವಾಗುತ್ತದೆ. ಇದಕ್ಕೆ 7 ವರ್ಷಗಳವರೆಗಿನ ಜೈಲು ಶಿಕ್ಷೆಗೂ ಒಳಗಾಗಬಹುದು. ಭಾರತದ ಸೂಕ್ಷ್ಮತೆಯನ್ನು ಟ್ವಿಟರ್ ಗೌರವಿಸುತ್ತದೆ ಎಂದು ಟ್ವಿಟರ್ ಇಂಡಿಯಾದ ಅಕಾರಿಗಳು ತಿಳಿರುವುದಾಗಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಇದು ಕೇವಲ ಸೂಕ್ಷ್ಮತೆಯ ಪ್ರಶ್ನೆಯಷ್ಟೇ ಅಲ್ಲ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ವಿರುದ್ಧವಾದುದಾಗಿರುವುದರಿಂದ ಟ್ವಿಟರ್ ಸ್ಪಷ್ಟನೆ ಅಸಮರ್ಪಕ ಎಂದು ಅವರು ತಿಳಿಸಿದ್ದಾರೆ.