5ಜಿ: ಚೀನಾ ಪ್ರವೇಶದ ಬಗ್ಗೆ ತೀರ್ಮಾನವಾಗಿಲ್ಲ

ಹೊಸದಿಲ್ಲಿ: ದೇಶದ 5ಜಿ ನೆಟ್‍ವರ್ಕ್ ಪ್ರಯೋಗದಲ್ಲಿ ಚೀನಾ ಟಿಲಿಕಾಂ ಸಂಸ್ಥೆಗಳಿಗೆ ಅವಕಾಶ ನೀಡಬೇಕೋ, ಇಲ್ಲವೋ ಎಂಬುದರ ಕುರಿತು ಕೇಂದ್ರ ಸರ್ಕಾರ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಳ್ಳಾ ತಿಳಿಸಿದ್ದಾರೆ.
ಅಲ್ಲದೇ ದೇಶದ ಸದ್ಯದ ನೆಟ್‍ವರ್ಕ್ ವ್ಯವಸ್ಥೆಯಲ್ಲಿ ಚೀನಾದ ಉಪಸ್ಥಿತಿ ಹೆಚ್ಚಿದ್ದು, ದೇಶದ ಜನರ ಸುರಕ್ಷತೆ ಹಾಗೂ ಭದ್ರತೆಗಾಗಿ ಕೇಂದ್ರ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.
5ಜಿ ಕುರಿತಾಗಿ ಸದ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಚೀನಾ ಕಂಪನಿಗಳಿಗೆ ಅವಕಾಶ ನೀಡಬೇಕೋ, ಇಲ್ಲವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಏನೇ ಆದರೂ ಸರ್ಕಾರ ದೇಶದ ಜನರ ಸುರಕ್ಷತೆಗೆ ಆದ್ಯತೆ ನೀಡಲಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ