ಬಿಜೆಪಿಯಿಂದ ದೇಶಾದ್ಯಂತ ಅಭಿಯಾನ ವದಂತಿ ದೂರ ಮಾಡಲು ತೀರ್ಮಾನ ಕೃಷಿ ಕಾಯ್ದೆ ಜಾಗೃತಿ!

ಹೊಸದಿಲ್ಲಿ: ದೇಶದ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಲು ಬಿಜೆಪಿಯು ದೇಶಾದ್ಯಂತ ಜಾಗೃತಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಿದೆ.
ದೇಶಾದ್ಯಂತ ಪಕ್ಷದಿಂದ 100 ಸುದ್ದಿಗೋಷ್ಠಿ ಹಾಗೂ 700 ಜಿಲ್ಲೆಗಳಲ್ಲಿ ರೈತರ ಜತೆ ತಲಾ ಒಂದು ಸಭೆ ನಡೆಸುವ ಮೂಲಕ ಕೃಷಿ ಕಾಯ್ದೆಗಳಿಂದ ಹೇಗೆ ಸುಧಾರಣೆ ಸಾಧ್ಯ, ರೈತರಿಗೆ ಇರುವ ಅನುಕೂಲಗಳು, ಹಬ್ಬಿಸುತ್ತಿರುವ ವದಂತಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.
ಕೃಷಿ ಕಾಯ್ದೆಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಲು, ರೈತರೊಂದಿಗೆ ಸಂವಹನ ಸಾಸಲು ಕೇಂದ್ರದ ಹಲವು ಸಚಿವರು ಸಹ ಭಾಗಿಯಾಗಲಿದ್ದಾರೆ. ಆ ಮೂಲಕ ಕಾಯ್ದೆ ಕುರಿತು ರೈತರಿಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಬಿಜೆಪಿ ಉದ್ದೇಶವಾಗಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂತ ಮೂರು ಕಾಯ್ದೆ ವಿರೋಸಿ ಪಂಜಾಬ್ ರೈತರು ಹೊಸದಿಲ್ಲಿಯಲ್ಲಿ 16 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ರೈತರಿಗೆ ಏಳು ಪ್ರಮುಖ ಪ್ರಸ್ತಾಪ ನೀಡಿದರೂ ರೈತರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ರೈತರಿಗೆ ಕಾಯ್ದೆ ಉಪಯೋಗದ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ