ನವದೆಹಲಿ: ಆರ್ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ.
ಪ್ರಸಕ್ತ ವರ್ಷದ ಎರಡನೇ ಮಾಸದ ಹಣಕಾಸು ನೀತಿ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ದಾಸ್ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿರುವ ಕುರಿತು ಪ್ರಕಟಿಸಿದ್ದಾರೆ. ಪ್ರಸಕ್ತ ಬಡ್ಡಿದರ ಶೇ.6ರಷ್ಟಿದ್ದು ಇದನ್ನು ಶೇ.5.75ರಷ್ಟಕ್ಕೆ ಇಳಿಕೆ ಮಾಡಲಾಗಿದೆ.
ಸತತ ಮೂರು ದಿನಗಳ ಕಾಲ ಹಣಕಾಸು ನೀತಿ ಸಮಿತಿ ಸಭೆ ನಡೆಸಿದ ಬಳಿಕ ಈ ಆದೇಶ ಹೊರ ಬಿದ್ದಿದೆ. ಕಳೆದ ತನ್ನ ಎರಡು ವರದಿ ಆಧರಿಸಿ ಆರ್ಬಿಐ 25ಬೇಸಿಸ್ ಪಾಯಿಂಟ್ ಇಳಿಕೆ ಮಾಡಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಇದರ ಜೊತೆ ಬ್ಯಾಂಕ್ ವಾಹಿವಾಟಿನ NEFT, RTGS ಶುಲ್ಕ ರದ್ದುಗೊಳಿಲಾಗಿದೆ.
ದೇಶದ ಆರ್ಥಿಕ ದರ ಕುಂಠಿತಗೊಳುವ ಸಾಧ್ಯತೆ ಇರುವುದರಿಂದ ಆರ್ಬಿಐ ದೊಡ್ಡ ಮೊತ್ತದ ರೆಪೋ ದರವನ್ನು ತಮ್ಮ ಮುಂದಿನ ಹಣಕಾಸು ನೀತಿಯಲ್ಲಿ ಕಡಿತಗೊಳಿಸಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಸಮೀಕ್ಷಾ ವರದಿ ನೀಡಿತ್ತು.