ಆರ್‌ಟಿಜಿಎಸ್‌, ನೆಫ್ಟ್ ಮೂಲಕ ಹಣ ವರ್ಗಾವಣೆ ಮೇಲೆ ಯಾವುದೇ ಶುಲ್ಕವಿಲ್ಲ

ಮುಂಬೈ: ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕ ಇಂದಿನಿಂದ ಅಗ್ಗ ವಾಗಲಿದೆ. ರಿಯಲ್-ಟೈಮ್ ಗ್ರೋಸ್ ಸೆಟಲ್ಮೆಂಟ್(ಆರ್‌ಟಿಜಿಎಸ್‌) ಹಾಗೂ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (ನೆಫ್ಟ್) ಮೂಲಕ ಹಣ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

ಈ ಕ್ರಮ ಇಂದಿನಿಂದ ಜಾರಿಗೆ ಬರುತ್ತಿದ್ದು, ಇಂದಿನಿಂದಲೇ ಆರ್‍ಬಿಐ ಅಡಿಯಲ್ಲಿ ಬರುವಾ ಎಲ್ಲಾ ಬ್ಯಾಂಕ್‍ಗಳು ಇದನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ. 2 ಲಕ್ಷ ರೂ. ವರೆಗಿನ ಹಣ ವರ್ಗಾವಣೆಗೆ ನೆಫ್ಟ್ ಬಳಸಲಾಗುತ್ತದೆ.

ಅಲ್ಲದೆ ಭಾರಿ ಮೊತ್ತದ ಹಣವನ್ನು ವರ್ಗಾವಣೆ ಮಾಡಲು ಆರ್‌ಟಿಜಿಎಸ್‌ ಅನ್ನು ಗ್ರಾಹಕರು ಬಳಸುತ್ತಾರೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‍ಬಿಐ, ನೆಫ್ಟ್ ಗೆ 1 ರಿಂದ 5 ರೂ. ಹಾಗೂ ಆರ್‌ಟಿಜಿಎಸ್‌ ಗೆ 5ರಿಂದ 50 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿತ್ತು.

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು, ಆರ್‌ಟಿಜಿಎಸ್‌ ಮೂಲಕ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಸಂಸ್ಕರಣಾ ಶುಲ್ಕಗಳು ಮತ್ತು ಸಮಯ-ಬದಲಾಗುವ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಆರ್‌ಬಿಐ ಇಂತಿಷ್ಟು ಶುಲ್ಕ ಎಂದು ವಿಧಿಸುತ್ತಿತ್ತು. ಆ ಶುಲ್ಕ ಹಾಗೂ ಅದರ ಮೇಲೆ ಒಂದಿಷ್ಟು ಲೆವಿ ವಿಧಿಸಿ ಬಳಿಕ ಬ್ಯಾಂಕುಗಳು ಗ್ರಾಹಕರಿಗೆ ಹಣವನ್ನು ವರ್ಗಾಯಿಸುತ್ತಿದ್ದವು.

ಆರ್‌ಬಿಐ ಐಬಿಎ ಮುಖ್ಯ ಕಾರ್ಯನಿರ್ವಾಹಕ ವಿ.ಜಿ ಕಣ್ಣನ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ತೆರಿಗೆಗಳನ್ನು ಪರಿಶೀಲಿಸುವ ಬೇಡಿಕೆಗಳ ಮಧ್ಯೆ ಬ್ಯಾಂಕುಗಳು ಎಟಿಎಂ ಶುಲ್ಕಗಳ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ.

ಎಟಿಎಂ ಬಳಕೆ ಗಮನಾರ್ಹವಾಗಿ ಬೆಳೆಯುತ್ತಿದ್ದು, ಈಗಾಗಲೇ ಎಟಿಎಂ ಚಾರ್ಜ್ ಮತ್ತು ಶುಲ್ಕಗಳನ್ನು ಬದಲಾಯಿಸುವಂತೆ ಗ್ರಾಹಕರು ಆಗ್ರಹಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ