ಎನ್ ಪಿಎ ಬಗ್ಗೆ ವಿವರಣೆ ನೀಡಿ: ರಘುರಾಮ್ ರಾಜನ್ ಗೆ ಸಂಸದೀಯ ಸಮಿತಿ

ನವದೆಹಲಿ: ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್​ಪಿಎ-ನಾನ್ ಪರ್ಫಾಮಿಂಗ್ ಅಸೆಟ್)ಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ ಸಂಸದೀಯ ಸಮಿತಿ ಕೇಳಿಕೊಂಡಿದೆ.
ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಅಂದಾಜುಗಳ ಸಂಸದೀಯ ಸಮಿತಿ ಮುಂದೆ ರಘುರಾಮ್ ರಾಜನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನಂತರ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ್ ಜ್ಯೋಶಿ ನೇತೃತ್ವದ ಸಂಸದೀಯ ಸಮಿತಿ ರಾಜನ್ ಅವರಿಗೆ ಆಹ್ವಾನಿ ನೀಡಿದ್ದು, ಎನ್ ಪಿಎ ಬಿಕ್ಕಟ್ಟಗುಳನ್ನು ಗುರುತಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದೆ.
ಈ ಸಂಬಂಧ ಮುರಳಿ ಮನೋಹರ್ ಜ್ಯೋಶಿ ಅವರು ರಾಜನ್ ಅವರಿಗೆ ಪತ್ರ ಬರೆದಿದ್ದು, ಸಂಸದೀಯ ಸಮಿತಿ ಮುಂದೆ ಹಾಜರಾಗಿ, ಹೆಚ್ಚುತ್ತಿರುವ ಎನ್ ಪಿಎಗಳ ಬಗ್ಗೆ ಸದಸ್ಯರಿಗೆ ವಿವರಣೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
2016ರ ವರೆಗೆ ಮೂರು ವರ್ಷಗಳ ಕಾಲ ಆರ್ ಬಿಐ ಗವರ್ನರ್ ಆಗಿದ್ದ ರಾಜನ್ ಅವರು ಈಗ ಶಿಕಾಗೋದ ಬೂತ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ