ಮೋದಿ 2.0 ಸರ್ಕಾರದ ಮೊದಲ ಆರ್​ಬಿಐ ಸಭೆ; 2019ರಲ್ಲಿ ಮೂರನೇ ಬಾರಿಗೆ ರೆಪೋ ದರ ಇಳಿಕೆ ಸಾಧ್ಯತೆ

ನವದೆಹಲಿ: ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ನೀತಿ ದರ ಸಂಬಂಧ ಜೂನ್ 4ರಂದು ಪಾಕ್ಷಿಕ ಸಭೆ ನಡೆಸಿತು. ಸಭೆಯ ವರದಿ ನಾಳೆ ಪ್ರಕಟಗೊಳ್ಳಲಿದೆ. ಮೋದಿ ನೇತೃತ್ವದ 2.0 ಸರ್ಕಾರ  ಅಸ್ತಿತ್ವಕ್ಕೆ ಬಂದ ಮೇಲೆ ಆರ್​ಬಿಐ ನಡೆಸಿದ ಮೊದಲ ಸಭೆ ಇದಾಗಿದೆ.

ನಿಧಾನಗತಿಯ ಜಿಡಿಪಿ ಮತ್ತು ಐಎಲ್​ ಮತ್ತು ಎಫ್​ ಎಸ್​ ಮಾರುಕಟ್ಟೆ ಸ್ಥಿರತೆಯಿಂದಾಗಿ ರೆಪೊ ದರವನ್ನು ಕನಿಷ್ಠ 25 ಬೇಸಿಕ್​ ಪಾಯಿಂಟ್​ ಇಳಿಕೆ ಮಾಡುವ ಸಂಭವವಿದೆ ಎಂದು ಆರ್ಥಿಕ ವಿಶ್ಲೇಷಕರು ಅಂದಾಜಿಸಿದ್ದಾರೆ. ರೆಪೋ ದರ ಇಳಿಕೆಯಿಂದ ಆರ್ಥಿಕತೆಗೆ ಹೆಚ್ಚಿನ ವೇಗ ನೀಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಹಿಂದಿನ ಮೋದಿ ಸರ್ಕಾರದ ಅವಧಿಯಲ್ಲಿ ಆರ್​ಬಿಐ ಮತ್ತು ಸರ್ಕಾರದ ನಡುವಿನ ಸಂಬಂಧವು ಹೆಚ್ಚು ಕಾಲದಿಂದಲೂ ವಿವಾದಾತ್ಮಕವಾಗಿಯೇ ಉಳಿದಿದೆ. ಇದೇ ಕಾರಣದಿಂದ ಆರ್​ಬಿಐ ಗೌವರ್ನರ್​ ಸ್ಥಾನಕ್ಕೆ ಉರ್ಜಿತ್ ಪಟೇಲ್​ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಲಾಗಿತ್ತು. ವಿತ್ತೀಯ ನೀತಿ ಸಮಿತಿಗೆ ದಾಸ್ ಅವರೇ ಮುಖ್ಯಸ್ಥರಾಗಿದ್ದಾರೆ. 2019ರಲ್ಲಿ ಎರಡು ಬಾರಿ ರೆಪೋ ದರವನ್ನು ಕಡಿಮೆಮಾಡಲಾಗಿದೆ.

ಕಳೆದ ಏಪ್ರಿಲ್​ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಆ ವೇಳೆಯೂ ರೆಪೋ ದರವನ್ನು 25 ಅಂಶಗಳಷ್ಟು ಇಳಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ 4:2 ಅನುಪಾತದಲ್ಲಿ ರೆಪೋ ದರ ಇಳಿಕೆಗೆ ಬಹುಮತ ವ್ಯಕ್ತವಾದಾಗ ಆಗಲೂ 25 ಬೇಸಿಕ್ ಪಾಯಿಂಟ್​ನಷ್ಟು ರೆಪೋ ದರ ಇಳಿಕೆ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ