2018 ನೇ ಸಾಲಿನಲ್ಲಿ 50,000 ಕೋಟಿ ಲಾಭಾಂಶ ಸರ್ಕಾರಕ್ಕೆ ನೀಡಲಿರುವ ಆರ್ ಬಿಐ

ಮುಂಬೈ: 2018 ನೇ ಸಾಲಿನಲ್ಲಿ ಆರ್ ಬಿಐ 50,000 ಕೋಟಿ ರೂಪಾಯಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ.
ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 2018 ರ ಆ.8 ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜೂ.30 ರಂದು ಕೊನೆಯಾದ ಆರ್ಥಿಕ ವರ್ಷದಲ್ಲಿ 500 ಬಿಲಿಯನ್ ರೂಪಾಯಿಗಳ ಲಾಭವನ್ನು ಸರ್ಕಾರಕ್ಕೆ ನೀಡಲಿದೆ.
ಕಳೆದ ವರ್ಷ 30,659 ಕೋಟಿ ರೂಪಾಯಿ ಲಾಭಾಂಶವನ್ನು ಆರ್ ಬಿಐ ಸರ್ಕಾರಕ್ಕೆ ವರ್ಗಾವಣೆ  ಮಾಡಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ನೋಟು ನಿಷೇಧದಿಂದ ಹೊಸ ನೋಟುಗಳನ್ನು ಮುದ್ರಿಸಬೇಕಾದ ಹಿನ್ನೆಲೆಯಲ್ಲಿ 2017 ರಲ್ಲಿ ಆರ್ ಬಿಐ ಸರ್ಕಾರಕ್ಕೆ ನೀಡುತ್ತಿದ್ದ ಲಾಭಾಂಶದ ಮೊತ್ತ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ