ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಅದಾಗಲೇ ಗೆದ್ದಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ಕೆ.ಆರ್ ಪೇಟೆ ಶಾಸಕ ನಾರಯಣಗೌಡ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಕೆ.ಆರ್. ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಾರಾಯಣಗೌಡ, ಕುಮಾರಣ್ಣ ಸಿಎಂ ಆಗಿರುವುದರಿಂದ ನಮಗೆ ಯಾವುದೇ ಭಯವೂ ಇಲ್ಲ. ನಿಖಿಲ್ ಮಂಡ್ಯದಲ್ಲಿ ಅದಾಗಲೇ ಗುಲುವು ಸಾಧಿಸಿದ್ದಾರೆ.ಅವರು ಈಗಾಗಲೇ ಮಂಡ್ಯ ಸಂಸದರಾಗಿದ್ದಾರೆ. ಬೇಕಾದರೆ ನಾನು ಚಾಲೆಂಜ್ ಮಾಡುತ್ತೇನೆ. ನಿಖಿಲ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಈಗಾಗಲೇ ಜಯ ಗಳಿಸಿದ್ದಾರೆ. ಅದಕ್ಕಾಗಿಯೇ ಈ ಸಮಾರಂಭದಲ್ಲಿ ಸನ್ಮಾನ ಮಾಡುತ್ತಿದ್ದೇವೆ. ಇದು ಕೇವಲ ಸಣ್ಣ ಸಂಭ್ರಮವಾಗಿದ್ದು, 23 ನಂತರ ದೊಡ್ಡ ಮಟ್ಟದ ಸಂಭ್ರಮಾಚರಣೆ ಮಾಡುತ್ತೇವೆ. ಅವರು ಈ ಬಾರಿ ಗೆಲ್ಲುವುದು ಖಚಿತವಾಗಿದೆ. ಬೇಕಾದರೆ ಬೆಟ್ಟಿಂಗ್ ಕಟ್ಟುತ್ತೇನೆ ಎಂದು ಶಾಸಕ ಸವಾಲು ಹಾಕಿದ್ದಾರೆ.
lok sabha election,mandya,nikhil kumaraswamy,narayanagowda