ಇಂದು ಕ್ವಾಲಿಫೈಯರ್ 2 ಬಿಗ್ ಫೈಟ್: ಚೆನ್ನೈ ಡ್ಯಾಡ್ಸ್ಗೆ ದೆಹಲಿ ಹುಡುಗರ ಸವಾಲು

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಇಂದು ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಕ್ವಾಲಿಫೈರ್ ಎರಡರಲ್ಲಿ ಇಂದು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
18 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಚೆನ್ನೈ ತಂಡ ಮತ್ತು 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದಿನ ಪಂದ್ಯವನ್ನ ಗೆದ್ದು ಫೈನಲ್ ಪ್ರವೇಶಿಸಲು ಹೋರಾಡಲವೆ.
ಮೊನ್ನೆಯಷ್ಟೆ ಪ್ಲೇ ಆಪ್ನ ಮೊದಲ ಕ್ವಾಲಿಫೈಯರ್ನ ಪಂದ್ಯದಲ್ಲಿ ಚೆನ್ನೈ ತಂಡ ತವರಿನಲ್ಲಿ ಮುಂಬೈ ವಿರುದ್ಧ ಸೋತು ಭಾರೀ ಮುಖಭಂಗ ಅನುಭವಿಸಿತ್ತು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊನ್ನೆ ಸನ್ರೈಸರ್ಸ್ ಪಂಟರ್ಸ್ ವಿರುದ್ಧ ಎರಡು ವಿಕೆಟ್ಗಳ ರೋಚಕ ಗೆಲುವು ಸಾಧಿಸಿ ಅಚ್ಚರಿ ಫಲಿತಾಂಶ ಕೊಟ್ಟಿತ್ತು. ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಬ್ಬರಿಸುತ್ತರುವ ಡೆಲ್ಲಿ ಹುಡುಗರು ಕ್ವಾಲೀಫೈಯರ್ 2ಕ್ಕೆ ಎಂಟ್ರಿಕೊಟ್ಟಿದ್ದಾರೆ.
ಚೆನ್ನೈ ಎಕ್ಸ್ಪ್ರೆಸ್ಗೆ ಬ್ರೇಕ್ ಹಾಕ್ತಾರಾ ಡೆಲ್ಲಿ ಬಾಯ್ಸ್
ಇಂದು ನಡೆಯುವ ಮಹಾ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ಫೇವರಿಟ್ ತಂಡ ಎನಿಸಿದೆ. ಯಾಕಂದ್ರೆ ಇತ್ತಿಚೆಗೆ ಮುಕ್ತಾಯವಾದ ಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲೂ ಚೆನ್ನೈ ತಂಡ ಗೆಲುವು ಸಾಧಿಸಿತ್ತು. ಹೀಗಾಗಿ ಚೆನ್ನೈ ವಿರುದ್ಧ ಅಯ್ಯರ್ ಪಡೆ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ.
ಮೊದಲ ಐಪಿಎಲ್ ಫೈನಲ್ ಕನಸಲ್ಲಿ ಯಂಗ್ ಬಾಯ್ಸ್..!
ಇದೇ ಮೊದಲ ಬಾರಿಗೆ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್, ಚೊಚ್ಚಲ ಐಪಿಎಲ್ ಗೆಲ್ಲುವ ಕನಸು ನನಸಾಗಿಸಲು ಯಂಗ್ ಡೆಲ್ಲಿಗೆ ಇನ್ನೆರಡು ಪಂದ್ಯಗಳು ಮಹತ್ವದ್ದಾಗಿದೆ. ಇನ್ನೂ ಮೊದಲ ಬಾರಿ ಕ್ವಾಲಿಫೈಯರ್ ಎಂಟ್ರಿಕೊಟ್ಟಿರುವ ಡೆಲ್ಲಿಗೆ ಫೈನಲ್ ಪ್ರವೇಶಿಸುವ ಅವಕಾಶ ಒದಗಿ ಬಂದಿದೆ. ಒಂದು ವೇಳೆ ಅಯ್ಯರ್ ಪಡೆ ಡ್ಯಾಡ್ಸ್ ಖ್ಯಾತಿಯ ಚೆನ್ನೈ ತಂಡವನ್ನ ಉಡೀಸ್ ಮಾಡಿದ್ರೆ . ಡೆಲ್ಲಿ ತಂಡ ಚೊಚ್ಚಲ ಫೈನಲ್ ಪ್ರವೇಶಿಸಿದ ಸಾಧನೆ ಮಾಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಥಿouಟಿgsಣeಡಿsಗಳೇ ಕಾರಣ . ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ರಿಷಭ್‌ ಪಂತ್‌ ತಂಡದ q್ರಂಪ್ ಕಾರ್ಡ್ಗಳಾಗಿದ್ದಾರೆ. ಶಿಖರ್ ಧವನ್, ಮರಿ ಸಚಿನ್ ಪೃಥ್ವಿ ಶಾ, ಕಾಲಿನ್‌ ಮನ್ರೊ ಸಹ ಡೆಲ್ಲಿ ಬ್ಯಾಟಿಂಗ್‌ Sಣಡಿeಟಿgಣh ಆಗಿದ್ದಾರೆ. ಸನ್ ರೈಸರ್ಸ್ ವಿರುದ್ಧ ಮಿಂಚಿದ್ದ ರಿಷಭ್ ಪಂತ್, ಪೃಥ್ವಿ ಶಾ ಚೆನ್ನೈ ವಿರುದ್ಧ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ಡಿಪಾರ್ಟ್ಮೆಂಟ್ನಲ್ಲಿ ಇಶಾಂತ್‌ ಶರ್ಮಾ, ಅಮಿತ್ ಮಿಶ್ರ ಸ್ಟಾರ್ಸ್ ಆಗಿದ್ದಾರೆ.
ಚೆನ್ನೈ-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ
ಇನ್ನೂ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, 14 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದೆ. ಉಳಿದ 6 ಪಂದ್ಯಗಳಲ್ಲಿ ಮಾತ್ರ ಡೆಲ್ಲಿ ಗೆಲುವಿನ ನಗೆ ಬೀರಿದೆ.
ಡೆಲ್ಲಿ ಹುಡುಗರಿಗೆ ಗೆಲುವಿನ ಪಾಠ ಕಲಿಸುತ್ತಾ ಚೆನ್ನೈ ?
ಧೋನಿ ನೇತೃತ್ವದ ಚೆನ್ನೈ ತಂಡ ಮೊನ್ನೆ ಮುಂಬೈ ವಿರುದ್ಧ ಮೂರನೇ ಬಾರಿಯೂ ಸೋತಿರಬಹುದು ಆದ್ರೆ ಇಂದು ಡೆಲ್ಲಿ ವಿರುದ್ಧ ಗೆದ್ದು ಫೈನಲ್ಗೆ ಹೋಗುವ ಫೇವರಿಟ್ ತಂಡ ಆಗಿದೆ. ಟೂರ್ನಿಯಲ್ಲಿ ಬೊಂಬಾಟ್ ಪರ್ಫಾಮನ್ಸ್ ಕೊಟ್ಟಿರುವ ಙeಟಟoತಿ ಬ್ರಿಗೇಡಿಯರ್ಸ್ ಬ್ಯಾಟಿಂಗ್ ಡಿಪಾರ್ಟ್ಮೆಂಟ್ ತಂಡವನ್ನ ಸೀಲಿನ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ.
ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಬಿಗ್ ಇನ್ನಿಂಗ್ಸ್ ಕಟ್ಟದೇ ತಂಡಕ್ಕೆ ತಲೆ ನೋವಾಗಿದ್ದಾರೆ. ಓಪನರ್ಸ್ಗಳಾದ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡುಪ್ಲೆಸಿಸ್ ಅವರಿಂದ ಇತ್ತಿಚೆಗೆ ಒಳ್ಳೆಯ ಓಪನಿಂಗ ಬಂದಿಲ್ಲ. ಇನ್ನು ಸುರೇಶ್ ರೈನಾ, ಅಂಬಟಿ ರಾಯ್ಡು ಮುರಳಿ ವಿಜಯ್ ಕ್ರೀಸ್ಗೆ ನೆಲಕಚ್ಚಿ ನಿಂತು ಆಡುತ್ತಿಲ್ಲ.
ಇನ್ನು ಬೌಲಿಂಗ್ ಡಿಫಾರ್ಟ್ಮೆಂಟ್ನಲ್ಲಿ ಇಮ್ರಾನ್ ತಾಹೀರ್ , ಪೇಸರ್ ದೀಪಕ್ ಚಹರ್ ಸೂಪರ್ ಸ್ಪೆಲ್ ಮಾಡಿ ಮಿಂಚುತ್ತಿದ್ದಾರೆ ಆದರೆ ಆಫ್ ಹರ್ಭಜನ್ ಸಿಂಗ್ ಮತ್ತು ಆಲ್ರೌಂಡರ್ ಡ್ವೇನ್ ಬ್ರಾವೋ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಸಾಂಘಿಕ ಹೋರಾಟ ಮತ್ತು ಧೋನಿಯ ರಣತಂತ್ರ ಚೆನ್ನೈ ತಂಡದ ಗೆಲುವು ನಿಂತಿದೆ.
ಒಟ್ನಲ್ಲಿ ಇಂದಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡ್ಯಾಡ್ಸ್ಗೆ ಯಂಗ್ ಬಾಯ್ಸ್ ಶಾಕ್ ನೀಡ್ತಾರಾ. ಇಲ್ಲ ಯಂಗ್ ಬ್ಯಾಯ್ಸ್ಗೆ ಚೆನ್ನೈ ಟಕ್ಕರ್ ನೀಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ