ಉಪಚುನಾವಣೆ ಮತದಾನ ಅಂತ್ಯ: ಜಮಖಂಡಿಯಲ್ಲಿ ಅತಿ ಹೆಚ್ಚು; ಮಂಡ್ಯದಲ್ಲಿ ಅತಿ ಕಡಿಮೆ ಮತದಾನ

ಬೆಂಗಳೂರು: ರಾಜ್ಯ ಉಪ ಸಮರದ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಬಹುತೇಕ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ.

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರ, ಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, ಶಾಸಕ ಶ್ರೀರಾಮುಲು ಮತ್ತು ಸಚಿವ ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯಕ್ಕೆ ಇಂದು ಮತದಾನ ನಡೆದಿದ್ದು, ಮತದಾರರಿಂದ ಕೊಂಚ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.

ಚುನಾವಣಾ ಆಯೋಗ ನೀಡಿರುವ ಸಂಜೆ 5 ಗಂಟೆ ವರೆಗಿನ ಮಾಹಿತಿ ಪ್ರಕಾರ ರಾಮನಗರದಲ್ಲಿ 73.71 %, ಜಮಖಂಡಿಯಲ್ಲಿ 81.58 %, ಶಿವಮೊಗ್ಗದಲ್ಲಿ 61.05 %, ಬಳ್ಳಾರಿ 63.85 %, ಮಂಡ್ಯದಲ್ಲಿ 53.93 % ಮತದಾನವಾಗಿದೆ.

ಮಂಡ್ಯದಲ್ಲಿ ಅತೀ ಕಡಿಮೆ ಮತದಾನವಾಗಿ ಶೇ.53.93ರಷ್ಟು ಮತದಾನವಾಗಿದೆ. ಜಮಖಂಡಿಯಲ್ಲಿ ಅತ್ಯಂತ ಹೆಚ್ಚಿನ ಮತದಾನವಾಗಿದೆ.

By election,Voting end,Mandya,Jamakhandi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ