ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ತಮ್ಮ ಮೇಲಿರುವ ಪ್ರಕರಣಗಳನ್ನೆಲ್ಲಾ ವಿಲೇವಾರಿ ಮಾಡಿಸಿಕೊಂಡ, ಸಂವಿಧಾನಿಕ ಸಂಸ್ಥೆಯನ್ನು ದುಡ್ದುಕೊಟ್ಟು ಕೊಂಡುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿದವರು ಹೊರತು ನಾನಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಗ್ದಾಳಿ ನಡೆಸಿದ್ದಾರೆ.

ನನ್ನ ವಿರುದ್ಧ ಬಿಎಸ್​ವೈ ಹಾಕಿರುವ ಪ್ರಕರಣಗಳ ವಿರುದ್ಧ 12 ವರ್ಷದಿಂದಲೂ ಮೆರಿಟ್​ ಮೇಲೆ ಹೋರಾಡುತ್ತಿದ್ದೇನೆ. ಆದರೆ, ತಮ್ಮ ಮೇಲಿನ ಪ್ರಕರಣಗಳನ್ನೆಲ್ಲಾ ವಿಲೇವಾರಿ ಮಾಡಿಸಿಕೊಂಡರಲ್ಲ ಅದು ಹೇಗೇ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲೂ ಮಾಡಿ ಮಾಡಿಸಿಕೊಂಡಿದ್ದಾರೆ. ಹೀಗಿರುವಾಗ ಮಾತನಾಡಲು ಬಿಎಸ್​ವೈಗೆ ಯಾವ ನೈತಿಕತೆ ಇದೆ? ನಾನು ಯಾವುದೇ ಸಂವಿಧಾನಿಕ ಸಂಸ್ಥೆಗಳನ್ನು ದುಡ್ಡು ಕೊಟ್ಟು ಕೊಂಡುಕೊಂಡಿಲ್ಲ. ಪ್ರಕರಣಗಳನ್ನು ನ್ಯಾಯಯುತವಾಗಿ ಎದುರಿಸುತ್ತಿದ್ದೇನೆ ಎಂದರು.

ಇದೇ ವೇಳೆ ಆರ್ ಅಶೋಕ್ ವಿರುದ್ಧವೂ ಗುಡುಗಿದ ಸಿಎಂ, ಅಶೋಕ್​ ಇಟ್ಟಷ್ಟು ನಾನಿಟ್ಟೀದೀನಾ…? ಅಶೋಕ್​ ಬಿಎಂಟಿಸಿಯನ್ನು ಹರಾಜು ಹಾಕಿಟ್ಟರು. ನನ್ನ ಅವಧಿಯಲ್ಲಿ ಸಾವಿರ ಕೋಟಿ ಠೇವಣಿ ಇಟ್ಟಿದ್ದೆ. ಅಶೋಕ್​ ಲೂಟಿ ಹೊಡೆದು ಸಾಲಕ್ಕೆ ತಂದರು ಎಂದು ಎಂದು ಹೇಳಿದ್ದಾರೆ.

lok sabha election,CM H D Kumaraswamy,B S Yedyurappa

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ