ಬೆಂಗಳೂರು: ತಮ್ಮ ಮೇಲಿರುವ ಪ್ರಕರಣಗಳನ್ನೆಲ್ಲಾ ವಿಲೇವಾರಿ ಮಾಡಿಸಿಕೊಂಡ, ಸಂವಿಧಾನಿಕ ಸಂಸ್ಥೆಯನ್ನು ದುಡ್ದುಕೊಟ್ಟು ಕೊಂಡುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿದವರು ಹೊರತು ನಾನಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಗ್ದಾಳಿ ನಡೆಸಿದ್ದಾರೆ.
ನನ್ನ ವಿರುದ್ಧ ಬಿಎಸ್ವೈ ಹಾಕಿರುವ ಪ್ರಕರಣಗಳ ವಿರುದ್ಧ 12 ವರ್ಷದಿಂದಲೂ ಮೆರಿಟ್ ಮೇಲೆ ಹೋರಾಡುತ್ತಿದ್ದೇನೆ. ಆದರೆ, ತಮ್ಮ ಮೇಲಿನ ಪ್ರಕರಣಗಳನ್ನೆಲ್ಲಾ ವಿಲೇವಾರಿ ಮಾಡಿಸಿಕೊಂಡರಲ್ಲ ಅದು ಹೇಗೇ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲೂ ಮಾಡಿ ಮಾಡಿಸಿಕೊಂಡಿದ್ದಾರೆ. ಹೀಗಿರುವಾಗ ಮಾತನಾಡಲು ಬಿಎಸ್ವೈಗೆ ಯಾವ ನೈತಿಕತೆ ಇದೆ? ನಾನು ಯಾವುದೇ ಸಂವಿಧಾನಿಕ ಸಂಸ್ಥೆಗಳನ್ನು ದುಡ್ಡು ಕೊಟ್ಟು ಕೊಂಡುಕೊಂಡಿಲ್ಲ. ಪ್ರಕರಣಗಳನ್ನು ನ್ಯಾಯಯುತವಾಗಿ ಎದುರಿಸುತ್ತಿದ್ದೇನೆ ಎಂದರು.
ಇದೇ ವೇಳೆ ಆರ್ ಅಶೋಕ್ ವಿರುದ್ಧವೂ ಗುಡುಗಿದ ಸಿಎಂ, ಅಶೋಕ್ ಇಟ್ಟಷ್ಟು ನಾನಿಟ್ಟೀದೀನಾ…? ಅಶೋಕ್ ಬಿಎಂಟಿಸಿಯನ್ನು ಹರಾಜು ಹಾಕಿಟ್ಟರು. ನನ್ನ ಅವಧಿಯಲ್ಲಿ ಸಾವಿರ ಕೋಟಿ ಠೇವಣಿ ಇಟ್ಟಿದ್ದೆ. ಅಶೋಕ್ ಲೂಟಿ ಹೊಡೆದು ಸಾಲಕ್ಕೆ ತಂದರು ಎಂದು ಎಂದು ಹೇಳಿದ್ದಾರೆ.
lok sabha election,CM H D Kumaraswamy,B S Yedyurappa