ಬಿಜೆಪಿ 12 ಅಭ್ಯರ್ಥಿಗಳ ಪಟ್ಟಿ ಪ್ರಕಟ: ರಾಜ್ಯದ ಬಾಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕದ ಬಾಕಿ ಉಳಿದ ಮೂರು ಕ್ಷೇತ್ರ ಸೇರಿ ಒಟ್ಟು 11 ಕ್ಷೇತ್ರಗಳ ಅಭ್ಯರ್ಥಿಗಳನ್ನೊಳಗೊಂಡ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಬಾಕಿವುಳಿದಿದ್ದ 3 ಕ್ಷೇತ್ರಗಳಾದ ರಾಯಚೂರು- ಕ್ಷೇತ್ರಕ್ಕೆ ರಾಜಾ ಅಮರೇಶ್​ ನಾಯಕ್​, ಕೊಪ್ಪಳ ಕ್ಷೇತ್ರಕ್ಕೆ ಸಂಗಣ್ಣ ಕರಡಿ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಅಣ್ಣಾ ಸಾಹೇಬ್​ ಜೊಲ್ಲೆ ಅವರ ಹೆಸರು ಅಂತಿಮಗೊಂಡಿದೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳ ಕ್ಷೇತ್ರಗಳಿಗೂ ಅಭ್ಯರ್ಥಿ ಬಿಡುಗಡೆಮಾಡಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಲಡಾಖ್​ನಲ್ಲಿ ಜಾಮ್​ಯಾಂಗ್​ ತ್ಸೇರಿಂಗ್​ ನಂಗ್ಯಾಲ್​ ಸ್ಪರ್ಧಿಸಲಿದ್ದಾರೆ.

lok sabha election; bjp releases 12 list of candidates

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ