ಮೋದಿ ದೇಶಕ್ಕೆ ಒದಗಿರುವ ಆಪತ್ತು: ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ

ಕೋಲ್ಕತ್ತ: ಪ್ರಧಾನಿ ಮೋದಿ ನಮ್ಮ ದೇಶಕ್ಕೆ ಒದಗಿರುವ ಅತಿದೊಡ್ಡ ಆಪತ್ತು. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ದೇಶ ಏನಾಗಬಹುದು ಎಂದು ಹೇಳುವುದು ಅಸಾಧ್ಯ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಕೋಲ್ಕತದ ಮೇಟಿಯಾಬ್ರಜ್​ನಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಹಾಗೂ ಬಿಜೆಪಿಗೆ ನಾನು ಮುಖ್ಯ ಟಾರ್ಗೆಟ್​. ನನ್ನ ಸೋದರಳಿಯ ಅಭಿಷೇಕ್​ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಡೈಮಂಡ್​ ಹಾರ್ಬರ್​ ಲೋಕಸಭಾ ಕ್ಷೇತ್ರದಲ್ಲಿ ಗಲಭೆ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದು ಆರೋಪಿಸಿದರು.

ಪಶ್ಚಿಮಬಂಗಾಳದಲ್ಲಿ ಎಲ್ಲ ಧರ್ಮದವರೂ ಸೌಹಾರ್ದ ಜೀವನ ನಡೆಸುತ್ತಿದ್ದಾರೆ. ನನ್ನ ಜೀವ ಕೊಟ್ಟಾದರೂ ರಾಜ್ಯದಲ್ಲಿ ಎಲ್ಲಿಯೂ ಗಲಭೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು. ನಾನು ಮುಸ್ಲಿಮರನ್ನು ಓಲೈಸುತ್ತೇನೆ ಎಂದು ಹಲವರು ಆರೋಪಿಸುತ್ತಾರೆ. ಅಂದರೆ ಅರ್ಥವೇನು? ಮುಸ್ಲಿಮರೂ ಈ ರಾಜ್ಯದಲ್ಲೇ ವಾಸವಾಗಿಲ್ಲವೇ? ಬಿಜೆಪಿ ಅಸಹ್ಯ ರಾಜಕಾರಣ ನಡೆಸುತ್ತಿದೆ ಎಂದು ಗುಡುಗಿದರು.

lok sabha election,mamata banerjee,pm modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ