ಮಂಡ್ಯ: ನಾನು ಜೆಡಿಎಸ್ ಬಿಡಲ್ಲ, ಶಿವರಾಮೇಗೌಡನನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಜೆಡಿಎಸ್ ನಲ್ಲೇ ನನ್ನ ರಾಜಕೀಯ ಅಂತ್ಯ ಎಂದು ಸಂಸದ ಎಲ್ ಆರ್ ಶಿವರಾಮೇ ಗೌಡ ಹೇಳಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಯಾವ ಆಫರ್ ಸಹ ಬಂದಿಲ್ಲ ಎಂದರು. ಇನ್ನು ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ 22 ವರ್ಷದಿಂದ ಅಧಿಕಾರ ಇರಲಿಲ್ಲ. ದೇವೇಗೌಡ, ಕುಮಾರಸ್ವಾಮಿ ಅಧಿಕಾರ ಕೊಟ್ಟಿದ್ದಾರೆ. ಕೆಲವರು ನನಗೆ ಅಧಿಕಾರ ಸಿಗದಂತೆ ತೊಂದರೆ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ರು.
ನಿಖಿಲ್ ಕುಮಾರಸ್ವಾಮಿಗೆ ವಿರೋಧ ಕೇಳಿ ಬರುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಚುನಾವಣೆಗೆ ನಿಂತಾಗಲೂ ನನ್ನ ವಿರುದ್ಧವೂ ಹಲವು ವಿರೋಧಗಳು ಕೇಳಿ ಬಂದಿತ್ತು. ಇನ್ನು ನನಗಿಂತ ಭಾರೀ ಅಂತರದಲ್ಲಿ ನಿಖಿಲ್ ಗೆಲುವು ಸಧಿಸುತ್ತಾರೆ ಎಂದು ಹೇಳಿದರು.
JDS,LR Shivaramegowda,Nikhil kumaraswamy,Mandya