ಮುಡ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರ ಪ್ರಕರಣ ಶಾಸಕರಿಬ್ಬರಿಗೆ ಸಮನ್ಸ್ ಜಾರಿ

ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಕಾರದಲ್ಲಿ(ಮುಡ) ನಡೆದಿದ್ದ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರ ಆರೋಪ ಸಂಬಂಧ ಇಬ್ಬರು ಶಾಸಕರು ಸೇರಿ 24 ಜನರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾನಾಗೇಂದ್ರ, 8 ಅಕಾರಿಗಳು ಸೇರಿದಂತೆ 24 ಜನರಿಗೆ ಸಮನ್ಸ್ ನೀಡಿ ಜು.20ರಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ನಿವೇಶನ ಹಗರಣ:
ಮಂಡ್ಯ ನಗರಾಭಿವೃದ್ಧಿ ಪ್ರಾಕಾರದಲ್ಲಿ 2009ರಲ್ಲಿ ಅಧ್ಯಕ್ಷರಾಗಿದ್ದ ವಿದ್ಯಾನಾಗೇಂದ್ರ, ನಿರ್ದೇಶಕರಾಗಿದ್ದ ಎಂ.ಜೆ.ಚಿಕ್ಕಣ್ಣ ಹಾಗೂ ಶಾಸಕರಾಗಿದ್ದ ಸಿ.ಎಸ್. ಪುಟ್ಟರಾಜು, ರಮೇಶ್ ಬಂಡಿಸಿದ್ದೇಗೌಡ, ಎಂ.ಶ್ರೀನಿವಾಸ್ ಸೇರಿದಂತೆ ಇತರೆ ಅಕಾರಿಗಳು ಸಭೆ ನಡೆಸಿ 2009ರ ನವೆಂಬರ್ 20ರಂದು ಸ್ಥಳೀಯ ಪತ್ರಿಕೆಗಳಿಗೆ ನಿವೇಶನ ಹಂಚಿಕೆ ಕುರಿತಂತೆ ಜಾಹೀರಾತು ನೀಡಿದ್ದರು.

2009ರ ನ.30ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವೆಂದು ಪ್ರಕಟಿಸಲಾಗಿತ್ತು. ರಾಜ್ಯಮಟ್ಟದ ಪತ್ರಿಕೆಗಳಿಗೆ ಯಾವುದೇ ಪ್ರಕಟಣೆಯನ್ನೂ ನೀಡಿರಲಿಲ್ಲ. ಪ್ರಕಟಣೆ ನೀಡುವುದಕ್ಕೂ ಮುನ್ನವೇ ಒಂದೇ ಕುಟುಂಬಕ್ಕೆ ಎರಡರಿಂದ ನಾಲ್ಕು ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒಪ್ಪಂದ ಮಾಡಿಕೊಂಡು ಗೌಪ್ಯವಾಗಿ ಪತ್ರಿಕೆಗೆ ಪ್ರಕಟಣೆ ನೀಡಿದ್ದರೆನ್ನಲಾಗಿದೆ.

ಇದರಿಂದಾಗಿ ಮುಡಾ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಸಾವಿರಾರು ಮಂದಿ ನಿವೇಶನರಹಿತರಿಗೆ ವಂಚನೆಯಾಗಿತ್ತು. ಈ ಬಗ್ಗೆ ವಿಚಾರ ತಿಳಿದ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು 2010ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ವಹಿಸಿತ್ತು.

ಬಹುಕೋಟಿ ರೂ. ಹಗರಣ ಸಿಬಿಐ ತನಿಖೆಗೆ:
ರಾಮನಗರ-ಚನ್ನಪಟ್ಟಣ ಪ್ರಾಕಾರ ಹಾಗೂ ಮಂಡ್ಯ ನಗರಾಭಿವೃದ್ಧಿ ಪ್ರಾಕಾರದಲ್ಲಿ ನಡೆದ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು.

ಮಂಡ್ಯ ನಗರಾಭಿವೃದ್ಧಿ ಪ್ರಾಕಾರದಲ್ಲಿ 5 ಕೋಟಿ, ಡಿಸಿಸಿ ಬ್ಯಾಂಕ್ 2 ಕೋಟಿ, ರಾಮನಗರ ಚನ್ನಪಟ್ಟಣ ಪ್ರಾಕಾರದಲ್ಲಿ 16.50 ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಮಂಡ್ಯ ಮತ್ತು ರಾಮನಗರ ಜಿಲ್ಲೆಯ ಸಾರ್ವಜನಿಕರು ಹಾಗೂ ಮುಖಂಡರ ಒತ್ತಡ ಹೆಚ್ಚಾಗಿತ್ತು. ಆದ ಕಾರಣ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಿತ್ತು.

ಪ್ರಕರಣದ ತನಿಖೆಯ ಜಾಡು ಹಿಡಿದ ಸಿಬಿಐ, ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಸಲ್ಲಿಸಿದ್ದ ದೂರನ್ನೂ ಪರಿಗಣನೆಗೆ ತೆಗೆದುಕೊಂಡು ತನಿಖೆ ನಡೆಸಿದರು. ಈ ಪ್ರಕರಣದಲ್ಲಿ ಅಂದಿನ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಆಯುಕ್ತ ಉಪೇಂದ್ರನಾಯಕ್, ನಿರ್ದೇಶಕ ಎಂ.ಜೆ.ಚಿಕ್ಕಣ್ಣ, ಶಾಸಕರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪದ್ಮಿನಿ ಸೇರಿದಂತೆ 24 ಮಂದಿಯ ವಿರುದ್ಧ 2016ರಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಮುರಳೀಧರ್ ಸೇರಿದಂತೆ ಕೆಲವರು ರಾಜ್ಯ ಹೈಕೋರ್ಟ್‍ಗೆ ಪ್ರಕರಣದಲ್ಲಿ ತಮ್ಮನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಎತ್ತಿ ಹಿಡಿದ ನ್ಯಾಯಾಲಯ ಮುರಳೀಧರ್ ಮತ್ತಿತರರ ಕೆಲವರ ಹೆಸರನ್ನು ಕೈಬಿಡುವಂತೆ ಸೂಚಿಸಿತ್ತು.
ನ್ಯಾಯಾಲಯದ ಆದೇಶವನ್ನು ಸವಾಲಾಗಿ ಸ್ವೀಕರಿಸಿದ ಸಿಬಿಐ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಮಂಡ್ಯ ನಗರಾಭಿವೃದ್ಧಿ ಪ್ರಾಕಾರದಲ್ಲಿ ನಡೆದಿರುವ ನಿವೇಶನ ಹಗರಣಕ್ಕೆ ಸಂಬಂಸಿದಂತೆ ಸಿಬಿಐ ನ್ಯಾಯಾಲಯ ಎಲ್ಲ 24 ಮಂದಿ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿರುವುದು ಸ್ವಾಗತಾರ್ಹ. ಈ ಪ್ರಕರಣದಲ್ಲಿ ಮೊದಲ ಜಯವಾಗಿದೆ.
ಕೆ.ಆರ್. ರವೀಂದ್ರ, ಸಾಮಾಜಿಕ ಕಾರ್ಯಕರ್ತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ