ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬ್ಲಾಗ್ ಮುಖಾಂತರ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ್ದಾರೆ. ಮಹಾತ್ಮ ಗಾಂಧಿಯವರ ದಂಡಿ ಉಪ್ಪಿನ ಸತ್ಯಾಗ್ರಹವನ್ನು ಉಲ್ಲೇಖಿಸಿ, “ಒಂದು ಮುಷ್ಠಿ ಉಪ್ಪು ಆಂಗ್ಲರ ಸಾಮ್ರಾಜ್ಯವನ್ನು ಅಲ್ಲಾಡಿಸಿತು” ಮಹಾತ್ಮಗಾಂಧಿಯವರ ಆಲೋಚನೆಗಳ ವಿರುದ್ಧ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅನ್ನು ಅಂತ್ಯಗೊಳಿಸಲು ಮಹಾತ್ಮಾ ಗಾಂಧಿಯವರು ಒಲವು ತೋರಿದರು. ನಮ್ಮ ಸರ್ಕಾರವು ಮಹಾತ್ಮಾ ಗಾಂಧಿಯ ಪಥವನ್ನು ಅನುಸರಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಮಾಜವನ್ನು ವಿಂಗಡಿಸಿದೆ ಎಂದು ತಮ್ಮ ದಾಳಿ ಮುಂದುವರೆಸಿರುವ ಪ್ರಧಾನಿ ಮೋದಿ, ಜಾತಿ-ಧರ್ಮದ ರಾಜಕೀಯ ಮಾಡುವ ಮೂಲಕ ಬಡವರ ಹಣವನ್ನು ಲೂಟಿ ಮಾಡಿರುವ ಕಾಂಗ್ರೆಸ್ ನಾಯಕರು ತಮ್ಮ ಖಾತೆಯನ್ನು ತುಂಬಿಸಿದ್ದಾರೆ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ರಾಜಕೀಯದಲ್ಲಿ ಕುಟುಂಬ ರಾಜಕೀಯಕ್ಕೆ ಜನ್ಮ ನೀಡಿದೆ. ರಾಜ್ಯದಲ್ಲಿ ಸಂವಿಧಾನದ 356 ನೇ ಅನುಚ್ಚೇಧವನ್ನು ಹಲವು ಬಾರಿ ದುರ್ಬಳಕೆ ಮಾಡಿದ್ದು, ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಅವಮಾನಿಸಿದೆ. ಕಾಂಗ್ರೆಸ್ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ನೀಡಿದೆ ಎಂದಿದ್ದಾರೆ.
ದಂಡಿ ಸತ್ಯಾಗ್ರಹ: ಮಾರ್ಚ್ 12, 1930 ರಂದು ಮಹಾತ್ಮ ಗಾಂಧಿಯವರು ದಂಡಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಬ್ಲಾಗ್ ಅನ್ನು ಬರೆದಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹವನ್ನು ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ.
ಈ ದಿನ, ಪಿತಾಮಹ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಅಹಮದಾಬಾದ್ನ ಸಬರಮತಿ ಆಶ್ರಮದಿಂದ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿ ದಂಡಿಗೆ ಪ್ರಯಾಣ ಆರಂಭಿಸಿದರು. ಈ ಸತ್ಯಾಗ್ರಹದಲ್ಲಿ, ಬಾಪು ಬ್ರಿಟೀಷರು ಮಾಡಿದ ಉಪ್ಪಿನ ಕಾನೂನನ್ನು ಮುರಿಯುವ ಮೂಲಕ ಶಕ್ತಿಯನ್ನು ಪ್ರದರ್ಶಿಸಿದರು. ಅದರ ಬಗ್ಗೆ ಸೂರ್ಯ ತನ್ನ ಸಾಮ್ರಾಜ್ಯದಲ್ಲಿ ಎಂದಿಗೂ ಸೂರ್ಯ ಮುಳುಗುವುದಿಲ್ಲ ಎನ್ನಲಾಗಿದೆ.
ಮೋದಿ ನಾಡಲ್ಲೇ ಕಾಂಗ್ರೆಸ್ ಚುನಾವಣಾ ರಣಕಹಳೆ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜ್ಯವಾದ ಗುಜರಾತ್ನಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಆಯೋಜಿಸಿದ್ದು, ರ್ಯಾಲಿಯನ್ನು ಹಮ್ಮಿಕೊಂಡಿದೆ. ಈ ಮೂಲಕ ಮೋದಿ ನಾಡಲ್ಲೇ ಇಂದು ಚುನಾವಣೆಗೆ ರಣಕಹಳೆ ಊದಲು ಕಾಂಗ್ರೆಸ್ ಸಜ್ಜಾಗಿರುವ ಸಮಯದಲ್ಲೇ ಪ್ರಧಾನಿ ಮೋದಿ ಈ ಬ್ಲಾಗ್ ಅನ್ನು ಬರೆದಿದ್ದಾರೆ.
ಮಹಾತ್ಮಾ ಗಾಂಧಿಯವರು ಮತ್ತು ಸರ್ದಾರ್ ಪಟೇಲ್ ನೆಲದಿಂದಲೇ ಕಾಂಗ್ರೆಸ್ ಪ್ರಬಲ ರಾಜಕೀಯ ಸಂದೇಶವನ್ನು ನೀಡಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ. ಸಿಡಬ್ಲ್ಯುಸಿ ಸಭೆಯ ಮೊದಲು, ಅಹಮದಾಬಾದ್ನಲ್ಲಿ ಸಬರಮತಿ ಆಶ್ರಮದಲ್ಲಿ ಪ್ರಾರ್ಥನಾ ಸಭೆ ಆಯೋಜಿಸಲಾಗಿದೆ. 58 ವರ್ಷಗಳ ನಂತರ ಗುಜರಾತ್ನಲ್ಲಿ ಈ ಕಾರ್ಯಕಾರಿಣಿ ಸಭೆಯನ್ನು ನಡೆಸಲಾಗುತ್ತಿದೆ. 1961 ರಲ್ಲಿ ಭಾವನಗರದಲ್ಲಿ ಕೊನೆಯ ಕಾರ್ಯಕಾರಿಣಿ ಸಭೆ ನಡೆದಿತ್ತು.
ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಬಳಿಕ ಗುಜರಾತ್ನ ಗಾಂಧಿನಗರದ ಸಮೀಪ ಅದಾಲಜ್ ನ ತ್ರಿಮಂದಿರ್ ನಲ್ಲಿ ಹಮ್ಮಿಕೊಂಡಿರುವ “ಜೈ ಜವಾನ್, ಜೈ ಕಿಸಾನ್” ಜನಸಂಕಲ್ಪ ಸಮಾವೆಶದಲ್ಲಿಯೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಬಾರಿಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.