ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಹಿಟ್‍ಮ್ಯಾನ್ ರೋಹಿತ್

ಟೀಂ ಇಂಡಿಯಾದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಈಗ ಮತ್ತೊಮ್ಮೆ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.

ಮೊನ್ನೆ ಮೊಹಾಲಿ ಏಕದಿನ ಪಂದ್ಯದಲ್ಲಿ ಎರಡು ಸಿಕ್ಸರ್‍ಗಳನ್ನ ಬಾರಿಸಿ ತಂಡದ ಮಿಸ್ಟರ್ ಕೂಲ್ ಧೋನಿಯ ದಾಖಲೆಯನ್ನ ಅಳಿಸಿ ಹಾಕಿದ್ದರು. ನಂತರ 95 ರನ್‍ಗಳಿಸಿ ಶತಕವಂಚಿಂತರಾಗಿದ್ದ ಮುಂಬೈಕರ್ ಇದೀಗ ಮತ್ತೊಂದು ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.

ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಇನ್ನು 46 ರನ್ ಗಳಿಸಿದ್ರೆ ಏಕದಿನ ಆವೃತ್ತಿಯಲ್ಲಿ 8 ಸಾವಿರ ರನ್ ಪೂರೈಸಿದ ಸಾಧನೆ ಮಾಡಿ ಎಲೈಟ್ ಕ್ಲಬ್ ಸೇರಲಿದ್ದಾರೆ. 46 ರನ್ ಗಳಿಸಿದ್ದೆ ಆದಲ್ಲಿ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನ ವೇಗವಾಗಿ ಸರಿಟ್ಟಿದ ಸಾಧನೆ ಮಾಡಲಿದ್ದಾರೆ. ಈಗಾಗಲೇ ಸವ್ಯಸಾಚಿ ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಮಂದಿ ಈ ಸಾಧನೆ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ