ಮೈಸೂರು:ಆ-೬: ಕಾರೊಂದು ಹಾರಂಗಿ ಜಲಾಶಕ್ಕೆ ಬಿದ್ದ ಪರಿಣಾಮ ಕಾರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಕಮರಹಳ್ಳಿ ಗ್ರಾಮದದಲ್ಲಿ ಹಾದು ಹೋಗಿರುವ ಕಾರೊಂದು ಹಾರಂಗಿ ನಾಲೆಯಲ್ಲಿ ಭಾನುವಾರ ರಾತ್ರಿ ಬಿದ್ದಿದೆ. ಕಾರಲ್ಲಿದ್ದ ನಾಲ್ವರೂ ಜಲಸಮಾಧಿಯಾಗಿದ್ದಾರೆ.
ಮೃತರು ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದ ಪಳನಿಸ್ವಾಮಿ, ಆತನ ಪತ್ನಿ ಸಂಜು, ಪುತ್ರ ನಿಖಿತ್, ಪುತ್ರಿ ಪೂರ್ಣಿಮಾ ಎಂದು ಗುರುತಿಸಲಾಗಿದೆ.
ಇಂದು ಮೃತದೇಹಗಳನ್ನು ಹೊರತೆಗಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬೆಟ್ಟದಪುರ ಪೊಲೀಸರು ತಿಳಿಸಿದ್ದಾರೆ.
Mysore,Car Fell Into Harangi Nullah,4 Death