ಅಮಾನತು ಆದೇಶ ರದ್ದು: ಇದು ನ್ಯಾಯ, ಸತ್ಯ ಮತ್ತು ಸಂವಿಧಾನಕ್ಕೆ ಸಂದ ಜಯ: ಪ್ರೊ.ಮಹೇಶ ಚಂದ್ರಗುರು

ಮೈಸೂರು:ಜೂ-೨೬: ಕಳೆದ ವಿಧಾನಸಭೆ ಚುನಾವಣೆ ವೇಳೆ ಸಂವಿಧಾನ ಉಳಿಸಿ ಎನ್ನುವ ಕಾರ್ಯಕ್ರಮದಲ್ಲಿ ನಾನು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ. ಅಂದಿನ ಮೈಸೂರು ವಿ.ವಿ ಕುಲಪತಿ ಪ್ರೊಫೆಸರ್ ಬಸವರಾಜು, ಕುಲಸಚಿವೆ ಭಾರತಿ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮನ್ನು ಅಮಾನತ್ತು ಮಾಡಿದ್ದರು. ಆದರೆ ಇಂದಿನ ಕುಲಪತಿ ಉಮೇಶ್, ಕುಲಸಚಿವ ರಾಜಣ್ಣ ಅವರನ್ನು ಒಳಗೊಂಡ ಸಿಂಡಿಕೇಟ್, ಶಿಸ್ತು ಪ್ರಾಧಿಕಾರ ರಚಿಸಿ ಅಮಾನತ್ತು ರದ್ದು ಮಾಡಿದ್ದಾರೆ ಎಂದು ಪ್ರೊ.ಮಹೇಶ ಚಂದ್ರಗುರು ತಿಳಿಸಿದ್ದಾರೆ.

ಕಳೆದ 21ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನನಗೆ ನಿನ್ನೆ ಆದೇಶದ ಪ್ರತಿ ತಲುಪಿದ್ದು, ಪ್ರಾಧ್ಯಾಪಕನಾಗಿ ನಾನು ಸೇವೆಗೆ ಹಾಜರಾಗಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೂ ಮನವರಿಕೆ ಮಾಡಿಕೊಡಲಾಗಿತ್ತು.

ಸದ್ಯಕ್ಕೆ ನನ್ನ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ಅರವಿಂದ ಮಾಲಗತ್ತಿ ಅವರ ಅಮಾನತು ರದ್ದಾಗಿದೆ. ಇದು ನ್ಯಾಯ, ಸತ್ಯ ಮತ್ತು ಸಂವಿಧಾನಕ್ಕೆ ಸಂದ ಜಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಕೆಲ ಪಟ್ಟ ಭದ್ರಹಿತಾಸಕ್ತಿಗಳು ಕುತಂತ್ರದಿಂದ ಮಾಡಿದ್ದ ತಪ್ಪು ಇದೀಗ ಸರಿಯಾಗಿದೆ ಎಂದರು.

Mysore,suspension order Cancel,prof.mahesh chandraguru

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ