ದಿಲ್ಲಿ: `ಬಾಹುಗಳಿಗೆ ಲಸಿಕೆ ಚುಚ್ಚಿಸಿಕೊಳ್ಳೋರೆಲ್ಲರು ಬಾಹುಬಲಿಗಳು. ಕೊರೋನಾ ವೈರಸ್ ವಿರೋ ಹೋರಾಟ ಕಣದಲ್ಲಿ ಸುಮಾರು 40ಕೋಟಿ ಜನರು ಲಸಿಕೆ ಚುಚ್ಚಿಸಿಕೊಂಡು ಬಾಹುಬಲಿಗಳೆನಿಸಿದ್ದಾರೆ ‘ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ಅವೇಶನಕ್ಕೆ ಮುನ್ನ ಸುದ್ದಿಗಾರರಲ್ಲಿ ಸಂತಸದಿಂದ ಪ್ರತಿಕ್ರಿಯಿಸಿದರು.
ಕೊರೋನಾ ವಿರುದ್ಧ ಹೋರಾಡಲು ಪ್ರತಿಯೋರ್ವರೂ ಬಾಹುಬಲಿಗಳಾಗಲೇಬೇಕು ಮತ್ತು ಲಸಿಕೆ ಚುಚ್ಚಿಸಿಕೊಂಡ ಪ್ರತಿಯೋರ್ವರು ಕೂಡ ಬಾಹುಬಲಿಗಳು .ಲಸಿಕೆ ಕಾರ್ಯಕ್ರಮ ದೇಶಾದ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿಯವರ ಹೇಳಿಕೆಗೆ ನೆಟ್ಟಿಗರಿಂದ ತುಂಬು ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರು ಜನಪ್ರಿಯ ಚಲನಚಿತ್ರ ಬಾಹುಬಲಿಯನ್ನು ಉಲ್ಲೇಖಿಸಿ, ಪ್ರಸ್ತುತ ಬಾಹುಬಲಿಗೂ ಎರಡು ಪಾರ್ಟ್‍ಗಳಿವೆ. ಡೋಸ್ 1ಮತ್ತು ಡೋಸ್2 ಎಂಬುದಾಗಿ ವಿಶ್ಲೇಷಿಸಿದ್ದಾರೆ. ಕೊರೋನಾ ವೈರಸ್ ಬಾಹುಬಲಿ ಚಿತ್ರದ ಕಟ್ಟಪ್ಪನ ಹಾಗೆ ಹಿಂದಿನಿಂದ ದಾಳಿ ಮಾಡುತ್ತವೆ. ಅಜಾಗ್ರತೆ ಮಾಡಿದಲ್ಲಿ ಉಳಿಗಾಲವಿಲ್ಲ, ಪ್ರಾಣಕ್ಕೇ ಕುತ್ತು ಎಂದು ಇನ್ನೋರ್ವ ನೆಟ್ಟಿಗರು ಎಚ್ಚರಿಸಿದ್ದಾರೆ.
ಇಡೀ ಜಗತ್ತನ್ನೇ ವ್ಯಾಪಿಸಿರುವ ಕೊರೋನಾ ವಿರೋ ವ್ಯಾಕ್ಸಿನ್ ಕಾರ್ಯಕ್ರಮಗಳ ಪ್ರಗತಿ ಸಹಿತ ಪಿಡುಗಿನ ನಿಯಂತ್ರಣ ನಿಟ್ಟಿನಲ್ಲಿ ತಾನು ವಿವಿಧ ವೇದಿಕೆಗಳಲ್ಲಾಗಿ ಮುಖ್ಯಮಂತ್ರಿಗಳ ಜತೆ ಸಮಗ್ರ ಚರ್ಚೆ ನಡೆಸಿದ್ದೇನೆ. ಇದೀಗ ಅವೇಶನ ನಡೆಯುತ್ತಿದೆ. ಪಿಡುಗಿನ ಬಗ್ಗೆ ಸದನದ ನಾಯಕರ ಜತೆ ಒಳ-ಹೊರಗೆ ಚರ್ಚಿಸಲು ಆಶಿಸಿದ್ದೇನೆ ಎಂದು ಮೋದಿ ಮಾಧ್ಯಮ ಮಂದಿಗೆ ತಿಳಿಸಿದರು.