ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ ಕೋವಿಡ್ ಸೋಂಕಿತರ ಸಂಖ್ಯೆ 1291 ಪತ್ತೆಯಾಗಿದ್ದು 40 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ಇಳಿಮುಖವಾಗಿದೆ.

ರಾಜ್ಯದಲ್ಲಿ ಇದುವರೆಗೆ 28,85,238 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಈ ಪೈಕಿ 36,197 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸದ್ಯ 27,527 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ.0.94ರಷ್ಟಿದ್ದು, ಮರಣ ಪ್ರಮಾಣ ಶೇ.3.09ರಷ್ಟಿದೆ.

ಜಿಲ್ಲಾವಾರು ಕೋವಿಡ್ ಸೋಂಕಿತರ ಪೈಕಿ ಬೆಂಗಳೂರು ನಗರ-266, ದಕ್ಷಿಣಕನ್ನಡ-126, ಹಾಸನ-125, ಮೈಸೂರು-125, ಉಡುಪಿ-85, ಚಿಕ್ಕಮಗಳೂರು-100 ಪ್ರಕರಣ ಪತ್ತೆಯಾಗಿದೆ. ಮೃತಪಟ್ಟವರ ಪೈಕಿ ಬೆಂಗಳೂರು ನಗರ-6, ದಕ್ಷಿಣ ಕನ್ನಡ-4, ಮೈಸೂರು-4 ಮಂದಿ ಇದ್ದಾರೆ. 12 ಜಿಲ್ಲೆಗಳಲ್ಲಿ ಶೂನ್ಯ ಮರಣ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ