![70th Republic day- karnataka tableau-Belgaum INC session](http://kannada.vartamitra.com/wp-content/uploads/2019/01/70th-Republic-day-karnataka-tableau-Belgaum-INC-session-495x381.jpg)
ಬೆಂಗಳೂರು: ಗಣರಾಜ್ಯೋತ್ಸವ ದಿನವಾದ ಜ.26ರಂದು ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಉಪ ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ನೇಮಿಸಲಾಗಿದೆ.
ಹೊಸದಾಗಿ ಸಚಿವ ಸಂಪುಟ ವಿಸ್ತರಣೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೂ ಆಗಬೇಕಿದ್ದು, ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲಿರುವ ಸಚಿವರೇ ಬಹುತೇಕ ಆಯಾ ಜಿಲ್ಲಾ ಉಸ್ತುವಾರಿಗಳಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ.
ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಅವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಪಾಲ್ಗೊಳ್ಳಲಿದ್ದಾರೆ.
ಡಿಸಿಎಂ, ಸಚಿವರ ಜಿಲ್ಲೆಗಳ ನಿಗದಿ ವಿವರ:
ಬಾಗಲಕೋಟೆ-ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಮನಗರ- ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ರಾಯಚೂರು- ಡಿಸಿಎಂ ಲಕ್ಷ್ಮಣ ಸವದಿ.
ಶಿವಮೊಗ್ಗ- ಸಚಿವ ಕೆ.ಎಸ್. ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ- ಆರ್.ಅಶೋಕ, ಧಾರವಾಡ-ಜಗದೀಶ್ ಶೆಟ್ಟರ್, ಚಿತ್ರದುರ್ಗ-ಬಿ.ಶ್ರೀರಾಮುಲು, ಚಾಮರಾಜನಗರ- ಎಸ್.ಸುರೇಶಕುಮಾರ್, ಕೊಡಗು-ವಿ.ಸೋಮಣ್ಣ, ಹಾವೇರಿ- ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ-ಕೋಟ ಶ್ರೀನಿವಾಸ ಪೂಜಾರಿ, ತುಮಕೂರು-ಜೆ.ಸಿ.ಮಾಧುಸ್ವಾಮಿ, ಗದಗ- ಸಿ.ಸಿ.ಪಾಟೀಲ್, ಬೀದರ್-ಪ್ರಭು ಚೌಹಾಣ್, ವಿಜಯಪುರ-ಶಶಿಕಲಾ ಜೊಲ್ಲೆ, ಬಳ್ಳಾರಿ-ಆನಂದ್ ಸಿಂಗ್, ದಾವಣಗೆರೆ-ಭೈರತಿ ಬಸವರಾಜ, ಮೈಸೂರು-ಎಸ್.ಟಿ. ಸೋಮಶೇಖರ್, ಕೊಪ್ಪಳ- ಬಿ.ಸಿ. ಪಾಟೀಲ್, ಚಿಕ್ಕಬಳ್ಳಾಪುರ-ಡಾ.ಕೆ. ಸುಧಾಕರ್, ಮಂಡ್ಯ-ಕೆ.ಸಿ. ನಾರಾಯಣಗೌಡ, ಉತ್ತರ ಕನ್ನಡ- ಶಿವರಾಂ ಹೆಬ್ಬಾರ್, ಬೆಳಗಾವಿ-ರಮೇಶ್ ಜಾರಕಿಹೊಳಿ, ಹಾಸನ-ಕೆ.ಗೋಪಾಲಯ್ಯ, ಕಲಬುರಗಿ- ಉಮೇಶ್ ಕತ್ತಿ, ಚಿಕ್ಕಮಗಳೂರು-ಅರವಿಂದ ಲಿಂಬಾವಳಿ, ಕೋಲಾರ-ಸಿ.ಪಿ.ಯೋಗೇಶ್ವರ, ಉಡುಪಿ- ಎಸ್.ಅಂಗಾರ ಹಾಗೂ ಯಾದಗಿರಿ-ಮುರುಗೇಶ್ ನಿರಾಣಿ.