ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರೆನೇಡ್ ಪತ್ತೆ

ಬೆಂಗಳೂರು: ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಣ್ದಲ್ಲಿ ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾಗಿದ್ದು, ರಾಜ್ಯರಾಜಧಾನಿಯಲ್ಲಿ ಆತಂಕವನ್ನುಂಟುಮಾಡಿದ್ದು, ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್ ಆಗಿದ್ಯಾ ಎಂಬ ಭಯ-ಭೀತಿ ಹೆಚ್ಚಿಸಿದೆ.

ರೈಲು ನಿಲ್ದಾಣದ ಪ್ಲಾಟ್ ಫಾರಂ ನಂ-1ರಲ್ಲಿ ಪಾಟ್ನಾ ಎಕ್ಸ್ ಪ್ರೆಸ್ ರೈಲಿನ ಎಸ್-1 ಬೋಗಿ ಬಳಿಯ ಟ್ರ್ಯಾಕ್ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮುಂಜಾನೆ 8:45ರ ಸುಮಾರಿನಲ್ಲಿ ಗ್ರೆನೆಡ್ ಇ ಟ್ಟು ಹೋಗಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರು ಅನುಮಾನಾಸ್ಪದ ವಸ್ತುವಿರುವುದಾಗಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳ ವಸ್ತುವನ್ನು ನಿಲ್ದಾಣದ ಹೊರಭಾಗಕ್ಕೆ ತೆದೊಯ್ದು ಪರಿಶೀಲನೆ ನಡೆಸಿದ್ದಾರೆ.

ಅನುಮಾನಾಸ್ಪದ ವಸ್ತು ಕಂಟ್ರಿಮೇಡ್ ಗ್ರೆನೆಡ್ ಎಂದು ಗೊತ್ತಾಗಿದೆ. ಅಲ್ಲದೇ ಅದರಲ್ಲಿ ಯಾವುದೇ ಸ್ಫೋಟಕಗಳನ್ನು ಇಡಲಾಗಿಲ್ಲ. ಅದು ಗ್ರೆಸ್ನೆಡ್ ನ ಹೊರಭಾಗವಷ್ಟೇ ಆಗಿದ್ದು, ಅದನ್ನು ಆತಂಕಸೃಷ್ಠಿಸಲೆಂದೇ ದುಶಇದು ಕರ್ಮಿಗಳು ಇರಿಸಿದ್ದಾರೆ ಎಂದು ತಿಳಿದುಬಂದಿದೆ.

ಸಧ್ಯದ ಮಾಹಿತಿ ಪ್ರಕಾರ ಕಂಟ್ರಿಮೇಡ್ ಗ್ರೆಸ್ನೆಡ್ ನ್ನು ಇನ್ನಷ್ಟು ಪರಿಶೀಲನೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲದೇ ರೈಲ್ವೆ ನಿಲ್ದಾಣದ ಹಲವು ಭಾಗಗಳಲ್ಲಿ ಕೆಲ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಸ್ಥಳಕ್ಕೆ ಬೆಂಗಳೂರಿನ ಪೊಲೀಸ್​​ ಆಯುಕ್ತರಾದ ರವಿ ಡಿ. ಚೆನ್ನಣ್ಣನವರ್​​​​​​​​​ ಆಗಮಿಸಿ ಪರೀಶಿಲನೆ ನಡೆಸಿದ್ದಾರೆ.

Bangalore,KRS railway station,grenade

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ