ಏರುತಿದೆ ಕೋರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಹೊಸದಾಗಿ 10913 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆಯಲ್ಲದೇ, 9091 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದುವರೆಗೆ ರಾಜ್ಯದಲ್ಲಿ 690269 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು,ಈ ಪೈಕಿ 118851 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ 873 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 114 ಮಂದಿ ಕೊರೋನಾಗೆ ಬಲಿಯಾಗಿದ್ದು ಇದುವರೆಗೆ ಸಾವನಪ್ಪಿರುವವರ ಸಂಖ್ಯೆ 9789ಕ್ಕೇರಿದೆ.
ಜನರ ನಿರ್ಲಕ್ಷ್ಯ-ಸೋಂಕಿತರ ಸಂಖ್ಯೆ ಏರಿಕೆ
ಕಳೆದ ಒಂದು ತಿಂಗಳಿನಿಂದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ತಿಂಗಳ ಹಿಂದೆ ರಸ್ತೆಗಳಲ್ಲಿ, ಮೆಟ್ರೋ,ಬಸ್‍ಗಳಲ್ಲಿ ಓಡಾಡುವವರ ಸಂಖ್ಯೆಗಿಂತ ಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರೂ ಕೊರೋನಾ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದು ಇದುವೇ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ-76
ಬಳ್ಳಾರಿ- 217
ಬೆಳಗಾವಿ -269
ಬೆಂಗಳೂರು ಗ್ರಾಮಾಂತರ -242
ಬೆಂಗಳೂರು ನಗರ-5009
ಬೀದರ್-12
ಚಾಮರಾಜನಗರ-72
ಚಿಕ್ಕಬಳ್ಳಾಪುರ-154
ಚಿಕ್ಕಮಗಳೂರು-129
ಚಿತ್ರದುರ್ಗ-418
ದಕ್ಷಿಣ ಕನ್ನಡ- 376
ದಾವಣಗೆರೆ-450
ಧಾರವಾಡ-150
ಗದಗ-68
ಹಾಸನ-489
ಹಾವೇರಿ-75
ಕಲಬುರಗಿ-144
ಕೊಡಗು-31
ಕೋಲಾರ-156
ಕೊಪ್ಪಳ-65
ಮಂಡ್ಯ-250
ಮೈಸೂರು-826
ರಾಯಚೂರು-73
ರಾಮನಗರ-125
ಶಿವಮೊಗ್ಗ-140
ತುಮಕೂರು-366
ಉಡುಪಿ-177
ಉತ್ತರ ಕನ್ನಡ-196
ವಿಜಯಪುರ-92
ಯಾದಗಿರಿ-66

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ