ಶ್ರೀಸೋಮನಾಥ್ ಟ್ರಸ್ಟ್ನ ಮುಂದಿನ ಅಧ್ಯಕ್ಷರಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಟ್ರಸ್ಟ್ ಗುಜರಾತ್ ನ ಗಿರ್-ಸೋಮನಾಥ್ ಜಿಲ್ಲೆಯ ಪ್ರಭಾಸ್ ಪಠಾಣ್ ನಗರದಲ್ಲಿರುವ ವಿಶ್ವ ಪ್ರಸಿದ್ಧ ಸೋಮನಾಥ ದೇವಾಲಯದ ನಿರ್ವಹಣೆ ಹೊತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸಿದ್ದ ಶ್ರೀ ಸೋಮನಾಥ ಟ್ರಸ್ಟ್ನ ವರ್ಚುವಲ್ ಸಭೆಯಲ್ಲಿ ಉನ್ನತ ಸ್ಥಾನಕ್ಕೆ ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಗುಜರಾತ್ ಮಾಜಿ ಮುಖ್ಯಮಂತಿ ಹಾಗೂ ಟ್ರಸ್ಟ್ ನ ಮಾಜಿ ಅಧ್ಯಕ್ಷ ಕೇಶುಭಾಯಿ ಪಟೇಲ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮನಾಥ ಟ್ರಸ್ಟ್ನ ಕಾರ್ಯವನ್ನು ಪ್ರಶಂಸಿಸಿದ ಪ್ರಧಾನಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ನಮ್ಮ ಪರಂಪರೆಯೊಂದಿಗೆ ಪ್ರವಾಸಿಗರ ಸಂಪರ್ಕವನ್ನು ಗಟ್ಟಿಗೊಳಿಸಲು ಟ್ರಸ್ಟ್ವತಿಯಿಂದ ಇನ್ನೂ ಮುಂದೆಯೂ ಹೆಚ್ಚಿನ ಮೂಲಸೌಕರ್ಯ ಹಾಗೂ ಮನರಂಜನಾ ಸೌಲಭ್ಯ, ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.
Related Articles
ಯೋಧರ ಜತೆ ಮೋದಿ ಇಂದು ದೀಪಾವಳಿ
November 14, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ, ಧರ್ಮ - ಸಂಸ್ಕೃತಿ, ಮನರಂಜನೆ
Comments Off on ಯೋಧರ ಜತೆ ಮೋದಿ ಇಂದು ದೀಪಾವಳಿ
Seen By: 99 ಹೊಸದಿಲ್ಲಿ: ದೇಶದ ಯೋಧರೊಂದಿಗೆ ದೀಪಾವಳಿ ಆಚರಿಸುವ ರೂಢಿಯನ್ನು ಮುಂದುವರಿಸುತ್ತ, ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗಡಿ ಪ್ರದೇಶಕ್ಕೆ ತೆರಳಿ ಶನಿವಾರ ಸೈನಿಕರೊಂದಿಗೆ [more]
Seen By: 55 ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಬಿಹಾರದ ಜನತೆಗೆ [more]
Seen By: 60 ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿಗೆ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಗ್ರಾಮ ಪಂಚಾಯಿತಿ [more]