ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧ

ಛಪ್ರಾ: ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಧಾರೆ.
ಛಪ್ರಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿಧಾರೆ.
ಬಿಹಾರದ ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದ್ದರೆ ಇಬ್ಬರು ಯುವರಾಜರು, ಈ ಪೈಕಿ ಒಬ್ಬ ಜಂಗಲ್ ರಾಜ್‍ನಿಂದ ಬಂದವರು, ತಮ್ಮದೇ ಸಿಂಹಾಸನ ರಕ್ಷಿಸಿಕೊಳ್ಳಲು ಹೋರಾಡುತ್ತಿಧಾರೆ ಎಂದು ಮೋದಿ ಹೇಳಿಧಾರೆ.
3-4 ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆ ವೇಳೆ ಈ ಇಬ್ಬರು ಯುವರಾಜರು ಬಸ್‍ನ ಟಾಪ್ ಮೇಲೆ ಹತ್ತಿ, ಕಪ್ಪು ಜಾಕೆಟ್‍ಗಳನ್ನು ಧರಿಸಿಕೊಂಡು ಹಳ್ಳಿಗಳಿಗೆ ಭೇಟಿ ನೀಡಿದ್ದನ್ನು ನೀವು ನೋಡಿರಬಹುದು ಎಂದೂ ಮೋದಿ ವ್ಯಂಗ್ಯವಾಡಿಧಾರೆ.
ಬಿಹಾರದಲ್ಲಿ ಎನ್‍ಡಿಎ ಮತ್ತೊಮ್ಮೆ ಸರ್ಕಾರ ರಚಿಸುವ ವಿಶ್ವಾಸವಿದೆ. ಮೊದಲ ಹಂತದ ಮತದಾನದ ಬಳಿಕ ಇದು ದೃಢಪಟ್ಟಿದೆ ಎಂದೂ ಅವರು ಹೇಳಿಧಾರೆ.
ಬಿಹಾರದ ಜನತೆ ರಾಜಕೀಯ ಪಂಡಿತರ ಮಾತುಗಳನ್ನು ಸುಳ್ಳಾಗಿಸಿಧಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಮೊದಲ ಹಂತದಲ್ಲಿ ಅತ್ಯಕ ಮತದಾನವಾಗಿದೆ ಎಂದು ಮೋದಿ ಹೇಳಿಧಾರೆ.
ಕಾಂಗ್ರೆಸ್‍ಗೆ ತರಾಟೆ:
ಪುಲ್ವಾಮ ದಾಳಿ ವಿಚಾರದಲ್ಲಿ ಭಾರತ ಸರ್ಕಾರವನ್ನು ಅನುಮಾನಿಸಿದ ಕಾಂಗ್ರೆಸ್ ಅನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ನೆರೆಯ ದೇಶ ಪುಲ್ವಾಮ ದಾಳಿ ವಿಚಾರದಲ್ಲಿ ಸತ್ಯ ಒಪ್ಪಿಕೊಂಡಿದೆ. ದೇಶದಲ್ಲಿ ಆಗುತ್ತಿರುವ ಸರ್ವಾಂಗೀಣ ಅಭಿವೃದ್ಧಿಯ ನಡುವೆ ರಾಜಕೀಯ ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿ ಬಲಿಕೊಡುವಂಥ ಶಕ್ತಿಗಳ ಬಗ್ಗೆ ಹುಷಾರಾಗಿರಬೇಕು. ನಮ್ಮ ದೇಶದ ಯೋಧರ ಬಲಿದಾನದಲ್ಲಿ ತಮ್ಮ ಲಾಭವನ್ನ ಇವರು ನೋಡುತ್ತಾರೆ ಎಂದು ಮೋದಿ ಟೀಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ