ಬೈಡನ್ ಆಡಳಿತದಲ್ಲಿ 20ಭಾರತೀಯರಿಗೆ ಸ್ಥಾನ

Varta Mitra News

ವಾಷಿಂಗ್ಟನ್: ನಿಯೋಜಿತ ಅಧ್ಯಕ್ಷ ಜೋ ಬೈಡನ್ ಪದಗ್ರಹಣಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಕರ್ನಾಟಕದ ಇಬ್ಬರು ಸೇರಿ,20ಭಾರತೀಯರನ್ನು ಬೈಡನ್ ಆಡಳಿತಾಕಾರಿಗಳಾಗಿ ಆಯ್ಕೆ ಮಾಡಲಾಗಿದೆ. ಅಮೆರಿಕ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಇಷ್ಟೊಂದು ಮಂದಿ ಭಾರತೀಯರಿಗೆ ಶ್ವೇತಭವನ ಮಣೆಹಾಕಿದೆ.
ಅಮೆರಿಕ ಜನಸಂಖ್ಯೆಯ ಶೇ.1ಭಾಗವಿರುವ ಅನಿವಾಸಿ ಭಾರತೀಯರಿಗೂ ಬೈಡನ್ ನೇತೃತ್ವದ ಆಡಳಿತದಲ್ಲಿ ಸ್ಥಾನಕಲ್ಪಿಸುತ್ತಿದ್ದು, 20 ಆಡಳಿತಾಕಾರಿಗಳ ಪೈಕಿ 13 ಮಂದಿ ಮಹಿಳೆಯರೂ ಸೇರಿದ್ದಾರೆ. ಅಲ್ಲದೆ, 17 ಮಂದಿ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಜನವರಿ 26ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಅಕಾರ ಸ್ವೀಕರಿಸುತ್ತಿದ್ದು, ಇದೇ ವೇಳೆ ಭಾರತೀಯ ಮೂಲದ ಕಮಲ ಹ್ಯಾರಿಸ್ ಕೂಡ ಉಪಾಧ್ಯಕ್ಷೆಯಾಗಿ ಅಕಾರ ಸ್ವೀಕರಿಸುತ್ತಿದ್ದಾರೆ. ಇದು ಭಾರತೀಯರ ಪಾಲಿಗೆ ಹೆಮ್ಮೆಯ ಕ್ಷಣವಾಗಿದ್ದು, ಭಾರತೀಯ ಮೂಲದ ಆಫ್ರಿಕನ್- ಅಮೆರಿಕನ್ ಒಬ್ಬರು ಉಪಾಧ್ಯಕ್ಷರ ಪಟ್ಟಕ್ಕೇರುತ್ತಿರುವುದು ಕೂಡ ಇದೆ ಮೊದಲು ಎನ್ನಲಾಗಿದೆ.
ಜತೆಗೆ ಕರ್ನಾಟಕದ ಜನತೆಗೂ ಹರ್ಷತರುವ ಸುದ್ದಿ ಬೈಡನ್ ಆಡಳಿತ ನೀಡಿದ್ದು, ಮಂಡ್ಯ ಮೂಲದವರಾದ ವೈದ್ಯ ವಿವೇಕ್ ಮೂರ್ತಿ ಅವರನ್ನು ಅಮೆರಿಕ ಸಾರ್ವಜನಿಕ ಆರೋಗ್ಯ ಇಲಾಖೆಯ ಅತ್ಯುನ್ನತ ಹುದ್ದೆಯಾದ ಸರ್ಜನ್ ಇನ್ ಜನರಲ್ ಆಗಿ ನೇಮಕ ಗೊಳಿಸಲಾಗಿದೆ.
ಅಲ್ಲದೆ, ಉಡುಪಿಯ ಅಕ್ಕುಂಜೆಯ ಮಾಲಾ ಅಡಿಗ ಅವರನ್ನು ಬೈಡನ್‍ರ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರೂಪಣ ನಿರ್ದೇಶಕಿಯಾಗಿ ನೇಮಕಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ