ಬೆಂಗಳೂರು: ಇನಿನಿಟಿ 2020 ನಿ ಸಂಗ್ರಹಣೆಗಾಗಿ ಆದಿತ್ಯ ಮೆಹ್ತಾ ಫೌಂಡೇಶನ್ ಮತ್ತು ಬಾರ್ಡರ್ ಸೆಕ್ಯುರಿಟಿ ಪೊರ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ಯಾರಾ ಸೈಕ್ಲಿಂಗ್ ಯಾತ್ರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಭಾನುವಾರ ವಿಧಾನಸೌಧದ ಪೂರ್ವ ಭಾಗದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಕಾರ್ಯಕ್ರಮದಡಿ ಯುದ್ಧ ಕಾರ್ಯಾಚರಣೆಯಲ್ಲಿ ವಿಶಿಷ್ಟಚೇತನರಾದ 30 ಯೋಧರು ಇನಿನಿಟಿ ರೈಡ್ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಕೇಂದ್ರ ಗಡಿ ಭದ್ರತಾ ಪಡೆ ವಿಶಿಷ್ಟಚೇತನರನ್ನು ಸಬಲಗೊಳಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ. ವಿಶಿಷ್ಟಚೇತನರಾದ ಯೋಧರು ಯಾರಿಗೂ ಕಡಿಮೆ ಇಲ್ಲ. ಯಾವುದನ್ನಾದರೂ ಸಾಸಬಲ್ಲರು ಎನ್ನುವುದನ್ನು ಇನಿನಿಟಿ ರೈಡ್ನಲ್ಲಿ ಪಾಲ್ಗೊಳ್ಳುವುದರ ಮೂಲಕ ನಿರೂಪಿಸಿದ್ದಾರೆ. ಜೀವದ ಹಂಗು ತೊರೆದು ಕಾಪಾಡುವ ಯೋಧರಿಗೆ ಮಾನಸಿಕ ಸ್ಥೈರ್ಯವನ್ನು ಸೈಕ್ಲಿಂಗ್ ಯಾತ್ರೆ ತುಂಬಲಿದೆ ಎಂದು ತಿಳಿಸಿದರು.
ವಿಶಿಷ್ಟ ಚೇತನ ಪ್ರತಿಭೆಗಳಿಗೆ ಉತ್ತೇಜಿಸುವ ಸಂಬಂಧ ನಿ ಸಂಗ್ರಹಿಸುವ ಕಾರ್ಯಕ್ರಮ ಇದಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಯಲಿರುವ ಈ ಯಾತ್ರೆ 43 ದಿನ 35 ನಗರಗಳಲ್ಲಿ ಸಂಚರಿಸಲಿದೆ. ಡಿ.31ಕ್ಕೆ ಈ ಯಾತ್ರೆ ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ದಯಾನಂದ, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.