ಸಿಎಂ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಲ್ವಾ; ಎಷ್ಟು ಸಾರಿ ಸುಳ್ಳು ಹೇಳುತ್ತಾರೆ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಗುಡುಗು

Deve Gowda

ಬೆಂಗಳೂರು:ಏ-30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಲ್ವಾ? ಬಿಜೆಪಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಸಿಎಂ ಎಷ್ಟು ಸಾರಿ ಹೇಳ್ತಾರೆ ಇಷ್ಟು ಕೀಳು ಮಟ್ಟದ ರಾಜಕಾರಣ ಕಾಂಗ್ರೆಸ್ ಮಾಡುತ್ತೆ ಅಂತ ಗೊತ್ತಿರಲಿಲ್ಲ. ನೂರು ಬಾರಿ ಸುಳ್ಳು ಹೇಳಿ ಜನತೆಗೆ ನಿಜ ಎಂದು ತೋರಿಸಲು ಹೊರಟಿದ್ದಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಅಮಿತ್ ಷಾ ಮತ್ತು ಎಚ್ಡಿಕೆ ವಿಮಾನದಲ್ಲಿ ಭೇಟಿಯಾದ ಬಗ್ಗೆ ನಕಲಿ ಟಿಕೆಟ್ ಹರಿದಾಡ್ತಿದೆ…ಇದು ಕೀಳು ಮಟ್ಟದ ರಾಜಕಾರಣ, ಅಸಲಿ ಟಿಕೆಟ್ ಇದ್ದರೆ ಸಿಎಂ ಬಿಡುಗಡೆ ಮಾಡಲಿ.. ಇವರೂ ಕರಾಚಿಗೆ ಹೋದ ಟಿಕೆಟ್ ಇಲ್ವಾ? ಎಂದು ಪ್ರೆಶ್ನೆ ಮಾಡಿದರು.

ಬಿಜೆಪಿ ಜತೆ ಹೋಗುವ ಪ್ರಶ್ನೆ ಇಲ್ಲ. ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಾವು ಬಿಜೆಪಿ ಜೊತೆ ಹೋಗಲ್ಲ ಎಂದಿರುವುದು ನಿಜ. ಹೌದು,  ಬಿಜೆಪಿ ಜತೆ ಕುಮಾರಸ್ವಾಮಿ ಹೋಗೋದನ್ನ ನಾನು ಒಪ್ಪಲ್ಲ ಎಂದಿರುವುದೂ ನಿಜ. ಇದರಲ್ಲಿ ತಪ್ಪೇನಿದೆ? ನಾವು ಬಹುಮತ ಪಡೆದೇ ಸರಕಾರ ಮಾಡ್ತೀವಿ ಅಂತಾನೂ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಹಾಸನಕ್ಕೆ ರಾಹುಲ್ ಗಾಂಧಿ ಬಂದಾಗ ಬಿಜೆಪಿಯ ಬಿ ಟೀಂ ಜೆಡಿಎಸ್ ಎಂದು ಹೇಳಿದ್ದರು. ಅವತ್ತಿನಿಂದ ಈ ರೀತಿಯ ಸುಳ್ಳು ಹೇಳಿಕೆ ಬರುತ್ತಿದೆ. ಇದು ಕೀಳು ಮಟ್ಟದ ರಾಜಕಾರಣ. ವಿಮಾನದ ನಕಲಿ ಟಿಕೆಟ್ ಕೂಡ ಬಿಡುಗಡೆ ಮಾಡಿದ್ದಾರೆ ನಾಚಿಕೆ ಆಗಬೇಕು ಅವರಿಗೆ…ಸಿದ್ದರಾಮಯ್ಯ ಮತ್ತು ಜಮೀರ್ ಕರಾಚಿ ಗೆ ಹೋಗಿದ್ದಾರೆ ಎಂದು ಮಾಧ್ಯಮದಲ್ಲಿ ತೋರಿಸುತ್ತಿದ್ದಾರೆ ಯಾವುದನ್ನ ನಂಬುವುದು ಯಾವುದನ್ನ ಬಿಡೋದು. ಕಾಂಗ್ರೆಸ್ ನವರು ಅತ್ಯಂತ ಕೀಳು ಮಟ್ಟದ ರಾಜಕರಣ ಮಾಡುತ್ತಿದ್ದಾರೆ ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡೋಣ ಅನುತ್ತಿದ್ದಾರೆ.ಅಮಿತ್ ಷಾ ಹೆಚ್ ಡಿಕೆ ಭೇಟಿ ಆಗಿದ್ರೆ ಸಿಎಂ ಬಳಿ ದಾಖಲೆ ಇದ್ರೆ ಬಿಡುಗಡೆ ಮಾಡಲಿ ಅದನ್ನ ಬಿಟ್ಟು ಆರೋಪ ಮಾಡೋದು ಏಕೆ? ಬೆಳಿಗ್ಗೆಯಿಂದ ಸಂಜೆಯವರೆಗೂ ಅದನ್ನೇ ಹೇಳೋದು ಏಕೆ? ಸೋಲುವ ಭೀತಿಯಿಂದ ಸಿದ್ದರಾಮಯ್ಯ ಒಬ್ಬರೆ ಬೆಳಿಗ್ಗೆಯಿದ ಸಂಜೆವರೆಗೂ ಹೇಳುತ್ತಿದ್ದಾರೆ. ಖರ್ಗೆ ಅವರು ಈ ಬಗ್ಗೆ ಏನಾದ್ರೂ ಹೇಳುತ್ತಿದ್ದಾರಾ? ಇದಕ್ಕಿಂತ ಬೇರೇನು ಹೇಳಬೇಕು ಹೇಳಿ…ಎಂದರು.

ಇನ್ನು ಬಿಜೆಪಿ ಜೊತೆ ನಾನು ಹೋಗುವುದಿಲ್ಲ ಬಹುಮತ ಬಾರದೆ ಇದ್ದರೆ ವಿಪಕ್ಷದಲ್ಲಿ ಕೂರಲು ಸಿದ್ದರಿದ್ದೀವಿ. ಅತಂತ್ರ ಚುನಾವಣಾ ಫಲಿತಾಂಶ ಬಂದ್ರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ ಇದನ್ನ ಸಾಕಷ್ಟು ಬಾರಿ ನಾನು ಹೇಳಿದ್ದೀನಿ. ಕಾಂಗ್ರೆಸ್ ಗೆ ಬಹುಮತ ಬಂದಿಲ್ಲ ಅಂದ್ರೆ ಏನ್ ಮಾಡ್ತಾರೆ ಮೊದಲು ಅವರು ಹೇಳಲಿ.. ಆಗ ಈ ಬಗ್ಗೆ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಆಡ್ವಾನಿ ಮನೆಗೆ ಹೋಗಿದ್ದು ನನಗೆ ಗೊತ್ತು ಆಗ ಸೋನಿಯಾಗಾಂಧಿ ಎಚ್ಚೆತ್ತುಕೊಂಡ್ರು. ಖರ್ಗೆ ಬದಲು ಸಿದ್ದರಾಮಯ್ಯ ಅವರನ್ನ ವಿಪಕ್ಷ ನಾಯಕನ ಸ್ಥಾನದಲ್ಲಿ ಕೂರಿಸಿದ್ರು ಇದೆಲ್ಲ ನನಗೆ ಗೊತ್ತಿದೆ. ಆದ್ರೆ ನಾನು ಮಾತಾಡಿರಲಿಲ್ಲ ಅಷ್ಟೆ ಅದರ ಅಗತ್ಯವೂ ಇಲ್ಲಾ. ಸಿಎಂ ಏನೇ ಸುಳ್ಳು ಹೇಳಿದರು ಈ ಬಾರಿ ರಾಜ್ಯದ ಜನತೆ ನಮ್ಮ ನೆಲ-ಜಲ-ಭಾಷೆ ಉಳಿಸಲು ಮತ್ತು ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಹಾಗೂ ರೈತರ ನೆಮ್ಮದಿ ಜೀವನಕೋಸ್ಕರ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಆಶಿರ್ವಾದ ಮಾಡಲಿದ್ದಾರೆ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದರು.

karnataka assembly election,Bangalore,H D devegowda,Cm Siddaramaiah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ