ಆನ್‍ಲೈನ್ ಶಿಕ್ಷಣದಲ್ಲಿ ಸರ್ಕಾರಿ ಶಾಲೆ ಉಲ್ಲೇಖವಿಲ್ಲ ಇಲಾಖೆ ಮಾರ್ಗಸೂಚಿಯಲ್ಲೇ ಗೊಂದಲ

ಬೆಂಗಳೂರು: ಶಿಕ್ಷಣ ಇಲಾಖೆ ಆನ್‍ಲೈನ್ ಕಲಿಕೆಗೆ ಸಂಬಂಸಿದ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಸರ್ಕಾರಿ ಶಾಲೆ ಕುರಿತು ಉಲ್ಲೇಖ ಇಲ್ಲದಿರುವುದು ಶಿಕ್ಷಕರು ಹಾಗೂ ಪೊಷಕರಲ್ಲಿ ಗೊಂದಲ ಮೂಡಿಸಿದೆ.
ಆನ್‍ಲೈನ್ ಕಲಿಕೆಯಿಂದಾಗಿ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆಯಾಗುತ್ತಿದೆ ಎಂದು ಪೊಷಕರು ದೂರಿನ ಆಧಾರದ ಮೇಲೆ ಶಿಕ್ಷಣ ಇಲಾಖೆ ತಜ್ಞರೊಂದಿಗೆ ಸಭೆ ನಡೆಸಿದ್ದು, ತಜ್ಞರ ವರದಿ ಮೇರೆಗೆ ಶಿಕ್ಷಣ ಇಲಾಖೆ ಆನ್‍ಲೈನ್ ಕಲಿಕೆಗೆ ಸಂಬಂಸಿದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ 30ನಿಮಿಷಗಳ ತರಗತಿ ನಡೆಸುವಂತೆ ಸೂಚಿಸಿದ್ದು ಇದರಲ್ಲಿ 3-4 ವಯಸ್ಸಿನ ಮಕ್ಕಳಿಗೆ ದಿನದಲ್ಲಿ ಒಂದು ಅವ, 1-5ನೇ ತರಗತಿ ವಿದ್ಯಾರ್ಥಿಗಳಿಗೆ 2 ಅವಯಲ್ಲಿ ತರಗತಿ ನಡೆಸಬೇಕು. 6ನೇ ತರಗತಿಯಿಂದ 8ನೇ ತರಗತಿವರೆಗೆ 30-45 ನಿಮಿಷದಂತೆ ದಿನದಲ್ಲಿ 3 ಅವಯಲ್ಲಿ ತರಗತಿ ನಡೆಸಬೇಕು. 9-10ನೇ ತರಗತಿ ವಿದ್ಯಾರ್ಥಿಗಳಿಗೆ 30-45 ನಿಮಿಷದಂತೆ 4 ಅವಯಲ್ಲಿ ತರಗತಿ ನಡೆಸುವಂತೆ ಸೂಚಿಸಲಾಗಿದೆ. ತಜ್ಞರ ವರದಿಯಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಮಾರ್ಗಸೂಚಿ ಮೀರಿ ಹೆಚ್ಚು ಗಂಟೆಗಳ ಕಾಲ ತರಗತಿ ನಡೆಸಿದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.
ಸರ್ಕಾರಿ ಶಾಲೆ ಶಿಕ್ಷಕರು-ವಿದ್ಯಾರ್ಥಿಗಳಲ್ಲಿ ಗೊಂದಲ
ಖಾಸಗಿ ಶಾಲೆಗಳ ಪೊಷಕರ ದೂರಿನ ಮೇರೆಗೆ ಸಮಿತಿ ರಚಿಸಿ ಸಮಿತಿಯ ವರದಿ ಅನ್ವಯ ಮಾರ್ಗಸೂಚಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆಗಳ ಬಗ್ಗೆ ಚಕಾರ ಎತ್ತದೇ ಇರುವುದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೊಷಕರಲ್ಲಿ ಗೊಂದಲ ಮೂಡಿಸಿದೆ. ಕೊರೋನಾ ಸೊಂಕು ಹರಡುತ್ತಿರುವ ಕಾರಣಕ್ಕೆ ವಿದ್ಯಾಗಮವನ್ನು ನಿಲ್ಲಿಸಿದೆ. ಅ.30ರವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವ ಶಿಕ್ಷಣ ಇಲಾಖೆ ರಜೆ ಬಳಿಕ ತರಗತಿ ನಡೆಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಂತಿಲ್ಲ. ಚಂದನ ವಾಹಿನಿಯಲ್ಲಿ ಸಂವೇದನಾ ತರಗತಿಗಳು ನಡೆಯುತ್ತಿದ್ದು ವಿದ್ಯಾರ್ಥಿಗಳು ಇದನ್ನೇ ಅವಲಂಬಿತ ರಾಗಿದ್ದಾರೆ.
ಖಾಸಗಿ ಶಾಲೆಯ ಶೇ.35 ವಿದ್ಯಾರ್ಥಿಗಳೂ ಆನ್‍ಲೈನ್ ಶಿಕ್ಷಣ ವಂಚಿತರೇ..!
ಶೇ.35 ರಿಂದ 40 ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಂತೆ ಈ ವಿದ್ಯಾರ್ಥಿಗಳೂ ವಾಹಿನಿಗಳನ್ನು ಅವಲಂಬಿತರಾಗಿದ್ದು ನೆಟ್‍ವರ್ಕ್ ಕಾರಣದಿಂದ ಆನ್‍ಲೈನ್ ಶಿಕ್ಷಣ ಪಡೆಯಲಾಗುತ್ತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ