ಐಎಂಎ ಬಹುಕೋಟಿ ವಂಚನೆ ಪ್ರಕರಣ ರೋಷನ್ ಬೇಗ್ ನಿವಾಸ ಶೋಧ !

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂತರಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ. ಅಲ್ಲದೆ ಆರೋಪಿ ಮನ್ಸೂರ್ ಖಾನ್‍ನನ್ನು ನ್ಯಾಯಾಲಯವು ನ.27ರವರೆಗೆ ಸಿಬಿಐ ಕಸ್ಟಡಿಗೆ ವಹಿಸಿ ಆದೇಶಿಸಿದೆ.
ಭಾನುವಾರ ರೋಷನ್ ಬೇಗ್‍ರನ್ನು ಬಂಸಿದ ಸಿಬಿಐ ಅಕಾರಿಗಳು ಸೋಮವಾರ ಬೇಗ್‍ರ ಮನೆ ಹಾಗೂ ಅವರ ಪುತ್ರನ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿ ಕುಟುಂಬಸ್ಥರನ್ನು ತೀವ್ರ ವಿಚಾರಣೆಗೊಳಪಡಿಸಿದರು. ಇಬ್ಬರು ಮಹಿಳಾ ಅಕಾರಿಗಳು ಸೇರಿದಂತೆ ಸಿಬಿಐ 13 ಅಕಾರಿಗಳ ತಂಡ ಬೆಳಗ್ಗೆ 7.30ರ ಸುಮಾರಿಗೆ ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಬೇಗ್‍ರ ನಿವಾಸದ ಮೇಲೆ ದಾಳಿ ನಡೆಸಿ ಬ್ಯಾಂಕ್ ವಹಿವಾಟು, ಬೆಲೆಬಾಳುವ ವಾಹನಗಳ ಬಗ್ಗೆ, ಆಸ್ತಿ ಪಾಸ್ತಿ, ವಿದೇಶದಿಂದ ಬೆಲೆಬಾಳುವ ಉಡುಗೊರೆಗಳು ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಬೇಗ್ ಪುತ್ರನ ಮನೆಯಲ್ಲೂ ಹುಡುಕಾಟ
ಜಯಮಹಲ್ ರಸ್ತೆಯಲ್ಲಿರುವ ರೋಷನ್ ಬೇಗ್ ಪುತ್ರ ರುಮಾನ್ ಬೇಗ್‍ನ ರೆಡಿಫಿಸ್ ಹಾಗೂ ಅತಿಥಿ ಗೃಹದ ಮೇಲೂ ಸಿಬಿಐ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಮನೆಯಲ್ಲಿರುವ ದಾಖಲಾತಿ, ಬ್ಯಾಂಕ್ ವ್ಯವಹಾರ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮನೆಯ ಕೆಲಸದವರನ್ನೂ ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್, ಆಪ್ತ ನಿಜಾಮುದ್ದಿನ್, ನವೀದ್ ಅಹಮದ್, ಐಎಂಎ ನಿರ್ದೇಶಕ ವಾಸಿಂ ಸೇರಿದಂತೆ ಒಟ್ಟು 30ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಪ್ರಕರಣದಲ್ಲಿ ಮನ್ಸೂರ್ ಖಾನ್‍ನನ್ನು ಬಂಸಿ ಸಾಕ್ಷಿ ಸಂಗ್ರಹಿಸಲಾಗಿತ್ತು. ಮನ್ಸೂರ್ ಖಾನ್ ನೀಡಿದ ಮಾಹಿತಿ ಆಧರಿಸಿ 400 ಕೋಟಿ ರೂ. ಹಣ ಪಡೆದ ಆರೋಪದಲ್ಲಿ ರೋಷನ್ ಬೇಗ್‍ರನ್ನು ಬಂಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ