ಸಕ್ರಿಯ ಸೋಂಕಿತರ ಸಂಖ್ಯೆ 2.8 ಲಕ್ಷಕ್ಕೆ ಇಳಿಕೆ

ಹೊಸದಿಲ್ಲಿ:ದೇಶದಲ್ಲಿ ಸೋಂಕಿನಿಂದ ಚೇತರಿಕೆಹೊಂದುತ್ತಿರುವವರ ಸಂಖ್ಯೆಹೆಚ್ಚಳ ಪ್ರಕ್ರಿಯೆ ಮುಂದುವರಿದಿದ್ದು,ಶುಕ್ರವಾರದ ವೇಳೆಗೆ ಒಟ್ಟು ಸಕ್ರಿಯಸೋಂಕಿತರ ಸಂಖ್ಯೆ 2.81 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಂದಿನ ಸೋಂಕುಪ್ರಕರಣಗಳಲ್ಲಿ ಗಣನೀಯ ಇಳಿಕೆ ದಾಖಲಾಗಿರುವುದರ ಪರಿಣಾಮ ಒಟ್ಟು ಪ್ರಕರಣಗಳಲ್ಲಿ ಸಕ್ರಿಯಪ್ರಕರಣದ ಪ್ರಮಾಣ ಕೇವಲ ಶೇ.2.78 ಕ್ಕೆ ಇಳಿಕೆಯಾಗಿದ್ದು, ಕಳೆದ 28 ದಿನಗಳಿಂದಲೂ ದೇಶದಲ್ಲಿ ನಿತ್ಯ ಸೋಂಕಿತರಿಗಿಂತ ಚೇತರಿಕೆ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಅಕಾರಿಗಳು ಹೇಳಿದ್ದಾರೆ.

ಇನ್ನು ಕಳೆದ 24 ಗಂಟೆಯಲ್ಲಿ 23,067 ಮಂದಿಗೆ ಸೋಂಕು ದೃಢಪಟ್ಟರೆ, ಇದೇ ಅವಯಲ್ಲಿ 24,661 ಮಂದಿ ಗುಣಮುಖರಾಗಿದ್ದಾರೆ ಇದರೊಂದಿಗೆ ಸಕ್ರಿಯ ಪ್ರಕರಣಗಳಲ್ಲಿ ನಿವ್ವಳ 1,930 ಪ್ರಕರಣಗಳು ಕಡಿಮೆಯಾದಂತಾಗಿದೆ ಎಂದಿದ್ದಾರೆ.

ಅಲ್ಲದೆ, ವಿಶ್ವರಾಷ್ಟ್ರಗಳಲ್ಲಿ 10 ಲಕ್ಷ ಜನರಲ್ಲಿ 9,931 ಮಂದಿಗೆ ಸೋಂಕು ದೃಢಪಟ್ಟಿದ್ದಾರೆ ಭಾರತದಲ್ಲಿ ಈ ಸಂಖ್ಯೆ ಪ್ರತಿದಶಲಕ್ಷಕ್ಕ 7,352 ರಷ್ಟಿದ್ದು, ಇದು ಪಶ್ಚಿಮರಾಷ್ಟ್ರಗಳಲ್ಲೇ ತೀರ ಕಡಿಮೆ ಸೋಂಕುದಾಖಲಾತಿ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಅಲ್ಲದೆ, ಜಾಗತಿಕ ರಾಷ್ಟ್ರಗಳಿಗೆ ಹೋಲಿಸಿದಾಗಲೂ ಭಾರತದಲ್ಲಿ ಪ್ರತಿದಶಲಕ್ಷ ಜನರಲ್ಲಿ 106 ಮಂದಿ ಸೋಂಕಿನಿಂದ ಮೃತರಾಗುತ್ತಿದ್ದು, ಸೋಂಕಿನಿಂದ ಅತಿ ಕಡಿಮೆ ಸಾವು ದಾಖಲಾಗಿರುವ ರಾಷ್ಟ್ರವೂ ಭಾರತವೇ ಎಂತಲೂ ಸಚಿವಾಲಯ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ