ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ 5,01,100ರೂ ದೇಣಿಗೆ

ಹೊಸದಿಲ್ಲಿ: ದೇಶದ ಮೊದಲ ನಾಗರಿಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಮ ಮಂದಿರ ನಿರ್ಮಾಣಕ್ಕೆ 5,01,100ರೂ.ಗಳ ಮೊದಲ ದೇಣಿಗೆಯನ್ನು ಸಮರ್ಪಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮತ್ತು ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ರಚನೆಯಾಗಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ಗೆ ಅವರು ತಮ್ಮ ದೇಣಿಗೆಯನ್ನು ನೀಡಿದರು.
ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್, ರಾಮ ಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್‍ನ ಖಜದ್ದಾರೆ ಗೋವಿಂದ್ ದೇವ್ ಗಿರಿ ಮತ್ತು ಇತರರನ್ನು ಒಳಗೊಂಡ ನಿಯೋಗವು ದೇವಾಲಯದ ನಿರ್ಮಾಣಕ್ಕೆ ರಾಷ್ಟ್ರಪತಿಗಳ ದೇಣಿಗೆ ಸಂಗ್ರಹಕ್ಕೆ ಬಂದಿತ್ತು.
ಅವರು ನಮ್ಮ ದೇಶದ ಮೊದಲ ನಾಗರಿಕ, ಹಾಗಾಗಿ ಈ ಅಭಿಯಾನವನ್ನು ಪ್ರಾರಂಭಿಸಲು ನಾವು ಅವರ ಬಳಿ ಹೋದೆವು. ರಾಷ್ಟ್ರಪತಿಗಳು ನಮಗೆ 5,01,000 ರೂ.ಗಳ ದೇಣಿಗೆಯನ್ನು ನೀಡಿದರು ಎಂದು ಅಲೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿ.ಹಿಂ.ಪ ಮತ್ತು ಕೆಲ ಸಂಸ್ಥೆಗಳು ಜನವರಿ 15ರಿಂದ ಫೆಬ್ರವರಿ 5ರವರೆಗೆ ಶ್ರೀ ರಾಮ ಜನ್ಮಭೂಮಿ ಮಂದಿರ ನಿ ಸಮರ್ಪಣ ಅಭಿಯಾನ ಎಂಬ ನಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದು, ವಿವಿಧ ರಾಜ್ಯಗಳಲ್ಲಿನ ಹಿಂದೂ ಕುಟುಂಬಗಳನ್ನು ತಲುಪಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ